ವಾಷಿಂಗ್ಟನ್: ಶೀಘ್ರವಾಗಿ ಅಭಿವೃದ್ಧಿಯ ಗುರಿಯನ್ನು ಸಾಧಿಸುವ ನಿಟ್ಟಿನಲ್ಲಿ ಭಾರತ ದೊಡ್ಡ ಚಿಂತನೆಯೊಂದಿಗೆ ದೊಡ್ಡ ಮಟ್ಟದಲ್ಲಿ ಮುನ್ನುಗ್ಗುತ್ತಿದೆ, ಚೀನಾವನ್ನು ಹಿಂದಿಕ್ಕುವುದಕ್ಕಾಗಿ ಅಮೆರಿಕಾದಂತಹ ದೇಶಗಳಿಗೆ ಮಹತ್ವದ ಅವಕಾಶಗಳನ್ನು ನೀಡುತ್ತಿದೆ ಎಂದು ಅಮೆರಿಕಾದ ಸಂಸದರು ಹೇಳಿದ್ದಾರೆ.
‘ಹಲವಾರು ವಲಯಗಳಲ್ಲಿ ಭಾರತ ಶೀಘ್ರ ಮುನ್ನಡೆಯುತ್ತಿದೆ, ಇದರಲ್ಲಿ ನವೀಕರಿಸಬಹುದಾದ ಇಂಧನವೂ ಒಂದು. ಭಾರತ ದೊಡ್ಡದಾಗಿ ಚಿಂತಿಸುತ್ತಿದೆ, ದೊಡ್ಡ ಮುಟ್ಟದಲ್ಲಿ ಮುನ್ನಡೆಯುತ್ತಿದೆ’ ಎಂದು ಪ್ರೊಫೆಸರ್ ರಾಬರ್ಟ್ ಒರ್ರ ತಿಳಿಸಿದ್ದಾರೆ.
‘ಸೋಲಾರ್ಮತ್ತು ಪವನ ಶಕ್ತಿಯ ಬಗ್ಗೆ ದೊಡ್ಡ ಗುರಿಯನ್ನು ಭಾರತ ಹೊಂದಿದೆ, ಅದನ್ನು ಸಾಧಿಸುತ್ತಿದೆ. ಬಂಡವಾಳವನ್ನು ದೇಶೀಯವಾಗಿ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಕರ್ಷಿಸುತ್ತಿದ್ದಾರೆ. ಅವರ ತಂತ್ರಗಾರಿಕ ದೂದೃಷ್ಟಿತ್ವ ಅಭಿವೃದ್ಧಿದಾಯಕ ಮತ್ತು ಆರ್ಥಿಕತೆಗೆ ಪೂರಕ’ ಎಂದಿದ್ದಾರೆ.
ಒರ್ರ ಅವರು ಕಳೆದ ವರ್ಷ ಭಾರತಕ್ಕೆ ಆಗಮಿಸಿದ್ದರು, ಇಲ್ಲಿನ ಹಲವಾರು ನಾಯಕರೊಂದಿಗೆ, ಉದ್ಯಮಿಗಳೊಂದಿಗೆ ಮಾತುಕತೆ ನಡೆಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.