ಗುವಾಹಟಿ; ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಅಸ್ಸಾಂನಲ್ಲಿ ಇಂಡಿಯನ್ ಅರ್ಗಿಕಲ್ಚರ್ ರಿಸಚ್ ಇನ್ಸ್ಟಿಟ್ಯೂಟ್(ಐಎಆರ್)ಗೆ ಶಂಕುಸ್ಥಾಪನೆ ನೆರವೇರಿಸಿದರು.
ಈ ವೇಳೆ ಮಾತನಾಡಿದ ಅವರು, ಭಾರತದ ಗ್ರಾಮೀಣ ಬದುಕನ್ನು ಬದಲಾಯಿಸುವ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ್ದೇನೆ. ರೈತರು ನಮ್ಮ ಪ್ರಗತಿಯ ಪ್ರಯೋಜನವನ್ನು ಪಡೆಯಬೇಕು. ಎಲ್ಲ ಕಾಲದ ಲಾಭವನ್ನೂ ಪಡೆದುಕೊಳ್ಳುವ ಸಾಮರ್ಥ್ಯ ಭಾರತಕ್ಕಿದೆ ಎಂದರು.
ಸಮಯ ಮತ್ತು ತಂತ್ರಜ್ಞಾನ ಯಾರನ್ನೂ ಕಾಯುವುದಿಲ್ಲ. ಅದು ಅತೀ ವೇಗದಲ್ಲಿ ಬದಲಾಗುತ್ತಿರುತ್ತದೆ. ನಮ್ಮ ಮೇಲೆ ನಂಬಿಕೆಯಿಟ್ಟು ಅಸ್ಸಾಂನಲ್ಲಿ ಸರ್ಕಾರ ರಚಿಸುವಂತೆ ಮಾಡಿದ್ದೀರಿ. ರೈತರ ಆದಾಯವನ್ನು ದ್ವಿಗುಣಗೊಳಿಸುವ ನಿಮ್ಮ ಕನಸನ್ನು ನಾವು ಈಡೇರಿಸುತ್ತೇವೆ. ಮೂರುವರ್ಷದಲ್ಲಿ ನಮ್ಮ ಸರ್ಕಾರ ಅತೀ ದೊಡ್ಡ ನಿರ್ಧಾರಗಳನ್ನು ತೆಗೆದುಕೊಂಡಿದೆ. ಭಾರತದಂತಹ ದೊಡ್ಡ ದೇಶಕ್ಕೆ ಮೂರು ವರ್ಷ ದೊಡ್ಡ ಸಮಯವಲ್ಲ ಎಂದಿದ್ದಾರೆ.
ನಮ್ಮ ಯೋಜನೆಗಳಿಂದ ರೈತರು ಲಾಭ ಪಡೆಯುತ್ತಿದ್ದಾರೆ. ಬೆಳೆ ವಿಮೆಯಿಂದ ಹಣ ಅವರಿಗೆ ದೊರಕುತ್ತಿದೆ ಎಂದರು.
ಸಾವಯವ ಕೃಷಿಗೆ ಈಶಾನ್ಯ ಅತ್ಯುತ್ತಮವಾಗಿದ್ದು, ಸಾವಯವ ಬೆಳೆಗೆ ವಿಶ್ವದಾದ್ಯಂತ ದೊಡ್ಡ ಮಾರುಕಟ್ಟೆಯಿದೆ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.