ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅಧಿಕಾರವಹಿಸಿಕೊಂಡ ಬಳಿಕ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಶೀಘ್ರಗತಿಯ ಪ್ರಗತಿಗಳು ಆಗುತ್ತಿದೆ. ಇದರಿಂದ ಆಲ್ಲೈನ್ ಟ್ರಾವೆಲ್ ಪೋರ್ಟಲ್ ಮತ್ತು ಬುಕ್ಕಿಂಗ್ ಆಪರೇಟರ್ಗಳಿಗೆ ಉತ್ತೇಜನ ದೊರೆಯುತ್ತಿದೆ ಎಂಬುದು ಪ್ರವಾಸೋದ್ಯಮ ವಲಯದಲ್ಲಿರುವವರ ಅಭಿಪ್ರಾಯ.
ಇ-ವೀಸಾ ಮತ್ತು ವೀಸಾ ಆನ್ ಅರೈವಲ್ ಹಾಗೂ ಪ್ರವಾಸೋದ್ಯದತ್ತ ಗಮನ ಮತ್ತು ಮೂಲಕಸೌಯರ್ಕ ಅಭಿವೃದ್ಧಿಗಳು ಪ್ರವಾಸಿಗರಿಗೆ ಉತ್ತೇಜನ ನೀಡಿದೆ. ಪ್ರಾದೇಶಿಕ ವಾಯು ಸಂಪರ್ಕದ ಉಡಾನ್ ಯೋಜನೆಗಳು ಪ್ರವಾಸೋದ್ಯಮಕ್ಕೆ ಮತ್ತಷ್ಟು ಉತ್ತೇಜನ ನೀಡುವ ನಿರೀಕ್ಷೆಯನ್ನು ಇಟ್ಟುಕೊಳ್ಳಲಾಗಿದೆ.
ಯಾತ್ರ.ಕಾಂನಲ್ಲಿ ಹಂಚಿಕೊಳ್ಳಲಾದ ವರದಿಯಂತೆ 2014ರ ಮೇ 15ರಿಂದ 2017ರ ಮೇ 14ರವರೆಗೆ ಪೋರ್ಟಲ್ನಲ್ಲಿ ಫ್ಲೈಟ್ ಬುಕಿಂಗ್ ಮಾಡುವವರ ಸಂಖ್ಯೆ ಶೇ.25ರಷ್ಟು ಹೆಚ್ಚಾಗಿದೆ. ಅಂತಾರಾಷ್ಟ್ರೀಯ ವಿಮಾನ ಬುಕ್ಕಿಂಗ್ ದೇಶಿ ಬುಕ್ಕಿಂಗ್ಗಿಂತ ದುಪ್ಪಟ್ಟಾಗಿ ಪ್ರಗತಿ ಕಂಡಿದೆ. ರೂಮ್ ಬುಕಿಂಗ್ ಶೇ.30ರಷ್ಟು ಹೆಚ್ಚಾಗಿದೆ.
‘ಪ್ರವಾಸೊದ್ಯಮವನ್ನು ಭಾರತದ ಆರ್ಥಿಕತೆಯ ಬಹುಮುಖ್ಯ ಸ್ತಂಭವನ್ನಾಗಿಸಲು ಕಳೆದ ಮೂರು ವರ್ಷದಲ್ಲಿ ಕೇಂದ್ರ ಮಹತ್ವದ ಯೋಜನೆಗಳನ್ನು ತಂದಿದೆ. ಅದರಲ್ಲಿ ಉಡಾನ್, ಇ-ವೀಸಾ, 180 ದೇಶಗಳ ಜನರಿಗೆ ವೀಸಾ ಆನ್ ಅರೈವಲ್ಗಳು ಬಹುಮುಖ್ಯವಾದುದಾಗಿವೆ. ಡಿಜಿಟಲ್ ಪೇಮೆಂಟ್ ಕೂಡ ಪ್ರವಾಸೋದ್ಯಮಕ್ಕೆ ದೊಡ್ಡ ಉತ್ತೇಜನ ನೀಡುತ್ತಿದೆ’ ಎಂದು ಯಾತ್ರ.ಕಾಂನ ಸಿಓಓ ಶರತ್ ಹಲ್ ಅಭಿಪ್ರಾಯಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.