ರಿಯಾದ್: ಭಯೋತ್ಪಾದನೆಯನ್ನು ಸದಾ ಪ್ರೋತ್ಸಾಹಿಸುವ ಪಾಕಿಸ್ಥಾನವನ್ನು ಇದೀಗ ಮುಸ್ಲಿಂ ರಾಷ್ಟ್ರಗಳೇ ದೂರವಿಡುತ್ತಿದೆ. ಇದಕ್ಕೆ ಪ್ರತ್ಯಕ್ಷ ಸಾಕ್ಷಿಯೇ ರಿಯಾದ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಕ್ ಪ್ರಧಾನಿ ನವಾಝ್ ಶರೀಫ್ ಅವರಿಗೆ ಆದ ಅವಮಾನ.
ರಿಯಾದ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೇರಿದಂತೆ ಹಲವಾರು ದೇಶಗಳ ನಾಯಕರು ಭಾಗವಹಿಸಿದ್ದರು. 54 ಮುಸ್ಲಿಂ ದೇಶಗಳ ನಾಯಕರು ಇಲ್ಲಿ ಉಪಸ್ಥಿತರಿದ್ದರು.
ಆದರೆ ಜಗತ್ತಿನ ಮುಂದೆ ಈ 54 ಮುಸ್ಲಿಂ ದೇಶಗಳು ನವಾಝ್ ಅವರಿಗೆ ಯಾವ ರೀತಿ ಅವಮಾನ ಮಾಡಿವೆ ಎಂಬುದನ್ನು ಅಲ್ಲಿನ ದೃಶ್ಯಾವಳಿಗಳು ತೋರಿಸುತ್ತದೆ.
ಈ ಕಾರ್ಯಕ್ರಮದಲ್ಲಿ ಭಾಷಣ ಮಾಡಲು ನವಾಝ್ ಸಾಕಷ್ಟು ತಯಾರಿಗಳನ್ನು ಮಾಡಿಕೊಂಡಿದ್ದರು, ಆದರೆ ಕೊನೆಗೂ ಅವರಿಗೆ ಭಾಷಣವನ್ನು ಮಾಡುವ ಅವಕಾಶವೇ ಸಿಗಲಿಲ್ಲ.
ಡೊನಾಲ್ಡ್ ಟ್ರಂಪ್ ಅವರೂ ನವಾಝ್ ಜೊತೆ ಹೆಚ್ಚು ಬರೆತು ಮಾತನಾಡಿಲ್ಲ, ಉಳಿದ ನಾಯಕರೂ ಅಂತರ ಕಾಯ್ದುಕೊಂಡಿದ್ದರು.
ಪಾಕಿಸ್ಥಾನವನ್ನು ಉಳಿದ ದೇಶಗಳು ಹೇಗೆ ಮೂಲೆಗುಂಪು ಮಾಡಿದವು ಎಂಬುದನ್ನು ಈ ವಿಡಿಯೋ ಸ್ಪಷ್ಟಪಡಿಸುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.