ನವದೆಹಲಿ: ಭಾರತ ಜಾಗತಿಕ ಪ್ರಗತಿಯ ಎಂಜಿನ್ ಆಗಬೇಕು ಮತ್ತು ಹವಾಮಾನ ಸ್ನೇಹಿ ಅಭಿವದ್ಧಿಗೆ ಉದಾಹರಣೆಯಾಗಬೇಕು ಎಂಬುದು ನಮ್ಮ ಗುರಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಗಾಂಧಿನಗರದಲ್ಲಿ ಆಫ್ರಿಕನ್ ಡೆವಲಪ್ಮೆಂಟ್ ಬ್ಯಾಂಕನ 52ನೇ ವಾರ್ಷಿಕ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭಾರತ ಮತ್ತು ಆಫ್ರಿಕಾದ ಪಾಲುದಾರಿಕೆಯು ಸಹಕಾರಿ ಮಾದರಿಯ ಮೇಲೆ ನಿಂತಿದೆ. ಆಫ್ರಿಕಾದ ಅಗತ್ಯತೆಗಳಿಗೆ ಭಾರತದ ಸ್ಪಂದನೆ ಇದೆ ಎಂದರು.
ಕಳೆದ 3 ವರ್ಷಗಳಲ್ಲಿ ಭಾರತದ ಸಚಿವರುಗಳು ಭೇಟಿ ನೀಡದ ಆಫ್ರಿಕಾದ ದೇಶವೇ ಇಲ್ಲ. ಸಹಕಾರದ ಮಾದರಿಯಲ್ಲಿ ನಮ್ಮ ಪಾಲುದಾರಿಕೆ ಇದೆ. 1996ರಿಂದ 2016ರ ವೆರೆಗೆ ಆಫ್ರಿಕಾ ದೇಶವು ಭಾರತದ ಸುಮಾರು 5ನೇ ಒಂದರಷ್ಟು ಹೂಡಿಕೆಯನ್ನು ಕಂಡಿದೆ ಎಂದರು.
ರೈತರ, ಬಡವರ, ಮಹೀಳೆಯರ ಸಬಲೀಕರಣದಂತಹ ಹಲವಾರು ಒಂದೇತೆರನಾದ ಸವಾಲುಗಳನ್ನು ಭಾರತ ಮತ್ತು ಆಫ್ರಿಕಾ ಎದುರಿಸುತ್ತಿವೆ. ಗ್ರಾಮೀಣ ಸಮುದಾಯದ ಹಣಕಾಸು, ಮೂಲಸೌಕರ್ಯ ನಿರ್ಮಾಣವನ್ನು ಒದಗಿಸುವುದು ನಮ್ಮ ಮತ್ತೋಂದು ಮಹತ್ವದ ಸವಾಲಾಗಿದೆ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.