ಮೆಲ್ಬೋರ್ನ್: ಆಸ್ಟ್ರಿಯಾದ ಸಂಸತ್ತು ಸಾರ್ವಜನಿಕ ಸ್ಥಳಗಳಲ್ಲಿ ಮುಖ ಪರದೆಗಳನ್ನು ಹಾಕುವುದಕ್ಕೆ ಸಂಪೂರ್ಣ ನಿಷೇಧ ಹೇರಿದೆ. ಈ ಬಗ್ಗೆ ಮಸೂದೆಯನ್ನು ಗುರುವಾರ ಅನುಮೋದನೆಗೊಳಿಸಿದೆ. ಆಡಳಿತ ಪಕ್ಷಗಳ ಸರ್ವಾನುಮತದಿಂದ ಈ ನಿಯಮವನ್ನು ಜಾರಿಗೊಳಿಸಲಾಗುತ್ತಿದೆ.
ಒಂದು ವೇಳೆ ಸಾರ್ವಜನಿಕ ಸ್ಥಳದಲ್ಲಿ ಮುಖ ಪರದೆ ಹಾಕಿಕೊಂಡರೆ 150 ಯುರೋ ದಂಡವನ್ನು ವಿಧಿಸಲಾಗುತ್ತದೆ. ಅಕ್ಟೋಬರ್ನಿಂದ ಈ ನಿಯಮ ಜಾರಿಗೆ ಬರಲಿದೆ.
ಏಕೀಕರಣ ಪ್ಯಾಕೇಜ್ನ ಭಾಗವಾಗಿ ಈ ನಿಯಮವನ್ನು ಜಾರಿಗೆ ತರಲಾಗುತ್ತಿದೆ. ಇದರನ್ವಯ ಸಾರ್ವಜನಿಕವಾಗಿ ಕುರಾನನ್ನು ಹಂಚುವುದು ಕೂಡ ಅಪರಾಧ. ಅಲ್ಲದೇ ಮುಸ್ಲಿಮರು ಏಕೀಕರಣದಲ್ಲಿ ಭಾಗಿಗಳಾಗಿ ಜರ್ಮನ್ ತರಗತಿಗಳನ್ನು ಪಡೆಯಬೇಕು ಮತ್ತು ಆಸ್ಟ್ರಿಯಾ ಪದ್ಧತಿಯಂತೆ ನೈತಿಕ ಶಿಕ್ಷಣವನ್ನೂ ಪಡೆಯಬೇಕಾಗಿದೆ.
ಆಸ್ಟ್ರಿಯಾದಲ್ಲಿ ನೆಲೆ ನಿಲ್ಲಲು ಪ್ರಯತ್ನಿಸುತ್ತಿರುವ ಇಸ್ಲಾಂ ನಿರಾಶ್ರಿತರನ್ನು ಟಾರ್ಗೆಟ್ ಮಾಡುವ ಸಲುವಾಗಿ ಈ ನಿಯಮ ಜಾರಿಗೊಳಿಸಲಾಗುತ್ತಿದೆ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.