ಲಕ್ನೋ: ಸೋಮವಾರ ಆರಂಭಗೊಂಡ ಉತ್ತರಪ್ರದೇಶದ 17ನೇ ಅಧಿವೇಶನಕ್ಕೆ ಬಿಜೆಪಿ ಶಾಸಕರೊಬ್ಬರು ಎತ್ತಿನ ಗಾಡಿಯಲ್ಲಿ ಬರುವ ಮೂಲಕ ಅಚ್ಚರಿ ಮೂಡಿಸಿದರು.
ಗರೌತದ ಶಾಸಕ ಜವಹರ್ ಎಲ್ ರಜಪೂತ್ ಅವರು ಬಿಳಿ ಬಣ್ಣದ ಕುರ್ತಾ ಧರಿಸಿ ಎತ್ತಿನ ಗಾಡಿಯಲ್ಲಿ ವಿಶೇಷವಾಗಿ ಎಂಟ್ರಿ ಕೊಟ್ಟ ಅವರನ್ನು ನೋಡಿ ಎಲ್ಲರೂ ಒಂದು ಕ್ಷಣ ಬೆರಗಾದರು.
ಈ ಹಿಂದೆಯೂ ಜನಪ್ರತಿನಿಧಿಗಳು ವಿಶೇಷ ರೀತಿಯಲ್ಲಿ ಅಧಿವೇಶನಗಳಿಗೆ ಆಗಮಿಸಿ ಸುದ್ದಿ ಮಾಡಿದ್ದಾರೆ. ಕಾಂಗ್ರೆಸ್ ಸಂಸದ ರಂಜೀತ್ ರಂಜನ್ ಅವರು ಮಹಿಳಾ ದಿನಾಚರಣೆಯಂದು ಹಾರ್ಲೆ ಡೇವಿಡ್ಸನ್ ಮೋಟಾರ್ ಸೈಕಲ್ನಲ್ಲಿ ಆಗಮಿಸಿದ್ದರು.
ಬಿಜೆಪಿ ಸಂಸದ ಅರ್ಜಿನ್ ರಾಮ್ ಮೇಘಾವಲ್ ಅವರು ಬೈಸಿಕಲ್ನಲ್ಲಿ ಆಗಮಿಸಿದ್ದರು. ಇಂಗಾಲದ ಹೊರಸೂಸುವಿಕೆಯನ್ನು ತಡೆಯಲು ಈ ಸಾರಿಗೆಯನ್ನು ಆಯ್ಕೆ ಮಾಡಿದ್ದಾಗಿ ಅವರು ಹೇಳಿಕೊಂಡಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.