ಅಮರಕಾಂತ್ : ನರ್ಮದಾ ನದಿ ಸಂರಕ್ಷಣೆಯ ಮಹತ್ವಾಕಾಂಕ್ಷಿಯ ರೂಪುರೇಷೆಗಳನ್ನು ಸೋಮವಾರ ಪ್ರಧಾನಿ ನರೇಂದ್ರ ಮೋದಿಯವರು ಮಧ್ಯಪ್ರದೇಶದ ಅಮರಕಾಂತದಲ್ಲಿ ಅನಾವರಣಗೊಳಿಸಿದರು.
ನಮಾಮಿ ದೇವಿ ನರ್ಮದೆ ಸೇವಾ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಅವರು ಭಾಗವಹಿಸಿದ್ದರು.
ಈ ವೇಳೆ ಮಾತನಾಡಿದ ಪ್ರಧಾನಿ ಮೋದಿ, ನರ್ಮದಾ ನದಿ ಸಂರಕ್ಷಣೆಯ ರೂಪುರೇಷೆಗಳ ದಾಖಲೆಗಳನ್ನು ಇತರ ರಾಜ್ಯಗಳೊಂದಿಗೂ ಹಂಚಿಕೊಳ್ಳಬೇಕು. ಇದರಿಂದ ಅವುಗಳು ಕೂಡಾ ಇದೇ ರೀತಿಯ ಕಾರ್ಯ ಮಾಡಲು ಸಹಕಾರಿಯಾಗುತ್ತದೆ ಎಂದರು.
ದೇಶದ ನದಿಗಳ ಸ್ಥಿತಿಗತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ಹಲವಾರು ನದಿಗಳು ಕೇವಲ ಭೂಪಟದಲ್ಲಿ ಮಾತ್ರ ಇದೆ. ಆದರೆ ಅದರಲ್ಲಿ ನೀರೇ ಇಲ್ಲ ಎಂದರು.
ನದಿ ಸಂರಕ್ಷಣಾ ಕಾರ್ಯವನ್ನು ಕೈಗೆತ್ತಿಕೊಂಡ ಶಿವರಾಜ್ ಸಿಂಗ್ ಚೌವ್ಹಾಣ್ ಸರ್ಕಾರದ ಕಾರ್ಯವನ್ನು ಶ್ಲಾಘಿಸಿದ ಅವರು, ರಾಜ್ಯ ಸರ್ಕಾರ ಸಿದ್ದಪಡಿಸಿದ ನರ್ಮದಾ ಸಂರಕ್ಷಣೆಯ ರೂಪುರೇಷೆ ಭವಿಷ್ಯದ ದೂರದೃಷ್ಟಿತ್ವವುಳ್ಳ ಸಮರ್ಥ ದಾಖಲೆ ಎಂದರು.
150 ದಿನಗಳ ನಮಾಮಿ ದೇವಿ ನರ್ಮದೆ ಸೇವಾ ಯಾತ್ರೆ ಇಂದು ಸಮಾರೋಪಗೊಂಡಿದ್ದು, ಇದನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಮಧ್ಯಪ್ರದೇಶದ ಜನತೆಯನ್ನು ಮೋದಿ ಅಭಿನಂದಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.