ಶ್ರೀನಗರ : ಕಾಶ್ಮೀರದಲ್ಲಿನ ಉದ್ರಿಕ್ತ ಜನರಿಂದ ನಡೆಯುವ ಕಲ್ಲು ತೂರಾಟವನ್ನು ತಪ್ಪಿಸುವ ಸಲುವಾಗಿ ಅಲ್ಲಿದ್ದ ಕಲ್ಲು ತೂರಾಟಗಾರನೊಬ್ಬನನ್ನೇ ಜೀಪ್ಗೆ ಕಟ್ಟಿದ ಸೇನಾಧಿಕಾರಿಗೆ ಸೇನಾ ತನಿಖಾ ನ್ಯಾಯಾಲಯವು ಕ್ಲೀನ್ ಚಿಟ್ ನೀಡಿದೆ. ಮತ್ತು ಅವರ ಕಾರ್ಯಕ್ಕೆ ಶ್ಲಾಘನೆ ನೀಡಿದೆ.
ಏಪ್ರಿಲ್ 9 ರಂದು ಜಮ್ಮು ಕಾಶ್ಮೀರದ ಬಡಗಾಂವ್ನಲ್ಲಿ ಚುನಾವಣಾ ಕರ್ತವ್ಯದಲ್ಲಿದ್ದ ಸೇನಾಧಿಕಾರಿ ಮೇಜರ್ ನಿತಿನ್ ಗೋಗಲ್ ಅವರು ಕಲ್ಲು ತೂರಾಟಗಾರರಿಂದ ತಪ್ಪಿಸಿಕೊಳ್ಳುವ ಸಲುವಾಗಿ ಉದ್ರಿಕ್ತ ಗುಂಪಿನಲ್ಲಿದ್ದ ವ್ಯಕ್ತಿಯೊಬ್ಬನನ್ನು ಜೀಪ್ನ ಮುಂಭಾಗಕ್ಕೆ ಕಟ್ಟಿದ್ದರು.
ಇದಕ್ಕೆ ಅಲ್ಲಿನ ಮಾಜಿ ಸಿಎಂ ಉಮರ್ ಅಬ್ದುಲ್ಲಾ ಸೇರಿದಂತೆ ಹಲವಾರು ರಾಜಕಾರಣಿಗಳಿಂದ ವಿರೋಧಗಳು ವ್ಯಕ್ತವಾಗಿದ್ದವು. ಆದರೀಗ ಸೇನಾ ತನಿಖಾ ನ್ಯಾಯಾಲಯವು ಮೇಜರ್ ನಿತಿನ್ ಗೋಗೋಲ್ ಅವರಿಗೆ ಈ ವಿಷಯದಲ್ಲಿ ಕ್ಲೀನ್ ಚೀಟ್ ನೀಡಿದ್ದು ಮಾತ್ರವಲ್ಲದೆ, ಗಾಯಗಳನ್ನು, ಹಾನಿಗಳನ್ನು ತಪ್ಪಿಸಲು ಅವರು ಕೈಗೊಂಡಿರುವ ಕ್ರಮಕ್ಕೆ ಶ್ಲಾಘನೆಯನ್ನು ವ್ಯಕ್ತಪಡಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.