ಕೊಚ್ಚಿ : ಕೊಚ್ಚಿ ಮೆಟ್ರೋ ಶೀಘ್ರದಲ್ಲಿ 23 ತೃತೀಯ ಲಿಂಗಿಗಳಿಗೆ ತನ್ನ ಸಂಸ್ಥೆಯಲ್ಲಿ ಉದ್ಯೋಗವನ್ನು ನೀಡಲಿದೆ. ಈ ಮೂಲಕ ಸರ್ಕಾರಿ ಸಾಮ್ಯದ ಸಂಸ್ಥೆಯೊಂದು ತೃತೀಯ ಲಿಂಗಿಗಳಿಗೆ ಅಗಾಧ ಉದ್ಯೋಗ ಅವಕಾಶವನ್ನು ನೀಡಿದಂತಾಗಿದೆ.
ಕಡೆಗಣೆನೆಗೆ ಒಳಗಾಗಿರುವ ತೃತೀಯ ಲಿಂಗಿ ಸಮುದಾಯವನ್ನು ಕಲ್ಯಾಣ ಪಡಿಸುವ ದೃಷ್ಟಿಯಿಂದ ಕೊಚ್ಚಿ ಮೆಟ್ರೋ ಈ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ.
ತೃತೀಯ ಲಿಂಗಿಗಳು ವಿವಿಧ ವಲಯಗಳಾದ ಹೌಸ್ಕೀಪಿಂಗ್, ಟಿಕೆಟ್ ಕೌಂಟರ್ ಸೇರಿದಂತೆ ಅವರ ಅರ್ಹತೆಗೆ ಅನುಗುಣವಾಗಿ ವಿವಿಧ ವಲಯಗಳಲ್ಲಿ ನಿಯೋಜನೆ ಮಾಡಲಾಗುತ್ತದೆ. ವಿದ್ಯಾವಂತ ತೃತೀಯ ಲಿಂಗಿಗಳಿಗೆ ಉನ್ನತ ಸ್ಥಾನವನ್ನು ನೀಡಲಾಗುತ್ತದೆ.
ತೃತೀಯ ಲಿಂಗಿಗಳನ್ನು ಸಮಾಜದ ಮುಖ್ಯವಾಹಿನಿಗೆ ಕರೆತರುವ ಪ್ರಯತ್ನ ಇದಾಗಿದೆ. ನಮ್ಮ ಇಂತಹ ಪ್ರಪ್ರಥಮ ಪ್ರಯತ್ನ ಖಂಡಿತವಾಗಿಯೂ ಯಶಸ್ವಿಯಾಗಲಿದೆ. ಇತರ ಸಂಸ್ಥೆಗಳು ಕೂಡಾ ನಮ್ಮನ್ನು ನೋಡಿ ಅವರಿಗೆ ಗೌರವವಯುತ ಸ್ಥಾನವನ್ನು ಕೊಡಲಿದೆ ಎಂದು ಕೇರಳ ಮೆಟ್ರೋ ರೈಲ್ ಲಿಮಿಟೆಡ್ನ ನಿರ್ವಹಣಾ ನಿರ್ದೇಶಕ ಇಲಿಯಾಸ್ ಜಾರ್ಜ್ ಹೇಳಿದ್ದಾರೆ.
ಈಗಾಗಲೇ 23 ಮಂದಿಯನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗಿದ್ದು, ಈಗ ಅವರು ತರಬೇತಿಯನ್ನು ಪಡೆಯುತ್ತಿದ್ದಾರೆ. ಈ ಮೊದಲ ಹಂತದ ತಂಡದ ಪ್ರದರ್ಶನವನ್ನು ನೋಡಿದ ಬಳಿಕ ಈ ಸಮುದಾಯದ ಇನ್ನಷ್ಟು ಮಂದಿಯನ್ನು ಸೇರಿಸಲಿದ್ದೇವೆ ಎಂದಿದ್ದಾರೆ.
ತಾರತಮ್ಯವನ್ನು ಮುಕ್ತಾಯಗೊಳಿಸಿ ತೃತೀಯ ಲಿಂಗಿಗಳನ್ನು ಮುಖ್ಯವಾಹಿನಿಗೆ ಕರೆತರುವ ನಿಯಮವನ್ನು ರೂಪಿಸಿ 2015 ರಲ್ಲಿ ತೃತೀಯ ಲಿಂಗಿ ನಿಯಮವನ್ನು ಜಾರಿಗೊಳಿಸಿದ ಮೊದಲ ರಾಜ್ಯ ಕೇರಳ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.