ಇತ: ಇತ್ತೀಚಿಗೆ ಯುಪಿಯ ಇತದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಸಹೋದರ ಮತ್ತು ತಾತ ಸೇರಿದಂತೆ 15 ಮಂದಿ ಸಂಬಂಧಿಕರನ್ನು ಕಳೆದುಕೊಂಡ 24 ವರ್ಷದ ಕಲ್ಪನಾ ಸಿಂಗ್ ಅವರನ್ನು ಇತ ಜಿಲ್ಲೆಯ ಸ್ವಚ್ಛ ಭಾರತ ರಾಯಭಾರಿಯನ್ನಾಗಿ ನೇಮಿಸಲಾಗಿದೆ.
ಅಲ್ಲಿನ ಜಿಲ್ಲಾ ಮ್ಯಾಜಿಸ್ಟ್ರೇಟ್ ಕಲ್ಪನಾ ಅವರನ್ನು ರಾಯಭಾರಿಯನ್ನಾಗಿ ನೇಮಿಸಿದ್ದಾರೆ. ಈ ವರ್ಷದೊಳಗೆ ಇತವನ್ನು ಸಂಪೂರ್ಣ ಬಯಲುಶೌಚ ಮುಕ್ತ ಜಿಲ್ಲೆಯನ್ನಾಗಿಸುವುದು ಆಕೆಯ ಗುರಿ.
ಕಲ್ಪನಾ ಸೆಲೆಬ್ರಿಟಿಯಲ್ಲ ಆದರೂ ಸ್ವಚ್ಛತೆಯ ರಾಯಭಾರಿಯಾಗಿದ್ದಾಳೆ. ಇದಕ್ಕೆ ಕಾರಣ ಸ್ವಚ್ಛ ಜೀವನ ಶೈಲಿಯ ಬಗ್ಗೆ ಆಕೆಗಿರುವ ಬದ್ಧತೆ, ಅದಕ್ಕಾಗಿ ಅವಳು ಮಾಡುತ್ತಿರುವ ಹೋರಾಟ.
ಆಕೆಯ ಎಂಗೇಜ್ಮೆಂಟ್ ದಿನವೇ ರಾತ್ರಿ ಆಕೆಯ 15ಸಂಬಂಧಿಕರು ಮೃತಪಟ್ಟಿದ್ದಾರೆ.. ಆದರೂ ಜೀವನೋತ್ಸಾಹ ಕಳೆದುಕೊಳ್ಳದ ಆಕೆ ಮದುವೆಯಾಗಿ ನಗ್ಲಾಲಾಲ್ ಸಿಂಗ್ ಗ್ರಾಮದಲ್ಲಿನ ಗಂಡನ ಮನೆ ಸೇರಿದ್ದಾಳೆ. ಆದರೆ ಅಲ್ಲಿ ಶೌಚಾಲಯವಿಲ್ಲದೇ ಇದ್ದುದು ಆಕೆಯನ್ನು ತೀವ್ರವಾಗಿ ಕಾಡಿದೆ.
ಆಕೆ ತಮ್ಮೂರಿಗೆ ಮದುವೆಯಾಗಿ ಬಂದಿರುವ ಸುದ್ದಿ ತಿಳಿದ ಮ್ಯಾಜಿಸ್ಟ್ರೇಟ್ ಯೋಗಕ್ಷೇಮ ವಿಚಾರಿಸಲು ಆಕೆಯನ್ನು ಭೇಟಿಯಾಗಿದ್ದಾರೆ. ಈ ವೇಳೆ ಆಕೆ ಶೌಚಾಲಯ ಇಲ್ಲದ ಬಗ್ಗೆ ಬೇಸರವನ್ನು ತೋಡಿಕೊಂಡಿದ್ದಾಳೆ.
ತನ್ನವರನ್ನೆಲ್ಲಾ ಕಳೆದುಕೊಂಡು ಅತೀವ ದುಃಖದಲ್ಲಿದ್ದರೂ ಆಕೆ ಶೌಚಾಲಯದ ಬಗ್ಗೆ ಪ್ರಸ್ತಾಪ ಮಾಡಿದ್ದು ಮ್ಯಾಜಿಸ್ಟ್ರೇಟ್ ಅವರಿಗೆ ಅಚ್ಚರಿ ತಂದಿತ್ತು. ತುಸುವೂ ತಡ ಮಾಡದೇ ಅವರು ಆಕೆಯ ಮನೆಯಲ್ಲಿ ಶೌಚಾಲಯ ನಿರ್ಮಿಸುವ ವ್ಯವಸ್ಥೆ ಮಾಡಿದ್ದಾರೆ. ಮಾತ್ರವಲ್ಲ ಆಕೆಯನ್ನು ಸ್ವಚ್ಛ ಭಾರತದ ರಾಯಭಾರಿಯನ್ನಾಗಿ ನೇಮಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.