ನವದೆಹಲಿ: ತನ್ನ ಖ್ಯಾತ ಪ್ರವಾಸಿ ತಾಣ ಅಲೆಪ್ಪಿಗಾಗಿ ಕೇರಳವು ಭಾರತದ ನೆಚ್ಚಿನ ಜಲ ಪ್ರವಾಸಿತಾಣ(ಇಂಡಿಯಾಸ್ ಫೇವರೇಟ್ ವಾಟರ್ಫ್ರಂಟ್ ಡೆಸ್ಟಿನೇಶನ್) ಎಂದು ಬಿರುದನ್ನು ಪಡೆದಿದೆ. ವೋಟಿಂಗ್ ಮೂಲಕ ಜನತೆ ಕೇರಳವನ್ನು ನೆಚ್ಚಿನ ತಾಣವಾಗಿ ಆಯ್ಕೆ ಮಾಡಿಕೊಂಡಿದ್ದಾರೆ.
ಪ್ರಧಾನಿ ಸಚಿವಾಲಯದ ರಾಜ್ಯ ಖಾತೆ ಸಚಿವ ಜಿತೇಂದ್ರ ಸಿಂಗ್ ಅವರು ಕೇರಳ ಪ್ರವಾಸೋದ್ಯಮದ ಪ್ರಧಾನ ಕಾರ್ಯದರ್ಶಿ ಡಾ.ವೇಣು.ವಿ ಅವರಿಗೆ ಪ್ರಶಸ್ತಿಯನ್ನು ಹಸ್ತಾಂತರ ಮಾಡಿದ್ದಾರೆ.
15 ಕೋಟಿ ಭಾರತೀಯ ಪ್ರವಾಸಿಗರು ಕೇರಳವನ್ನು ಆಯ್ಕೆ ಮಾಡಿದ್ದಾರೆ. ಇದು ರಾಜ್ಯದ ಪ್ರವಾಸೋದ್ಯಮದ ಜನಪ್ರಿಯತೆಯನ್ನು ತೋರಿಸುತ್ತದೆ. ಉತ್ತಮ ತಾಣವನ್ನಾಗಿಸಲು ಕೇರಳ ಪ್ರವಾಸೋದ್ಯಮ ಇಲಾಖೆ ಹೊಸ ಹೊಸ ಐಡಿಯಾ, ನಾವೀಣ್ಯ ಯೋಜನೆಗಳನ್ನು ಹೊರತರುತ್ತಲೇ ಇದೆ. ಈ ಅವಾರ್ಡ್ ಹೊಸ ಹೊಸ ಯೋಜನೆ ತರಲು ನಮಗೆ ಪ್ರೇರಣೆ ಎಂದು ವೇಣು ಹೇಳಿದ್ದಾರೆ.
ಅಲೆಪ್ಪಿ ಕೇರಳದ ಎವರ್ ಗ್ರೀನ್ ಬ್ಯಾಕ್ ವಾಟರ್ ತಾಣವಾಗಿದ್ದು, ಇಲ್ಲಿನ ವಿಧ ವಿಧದ ಬೋಟ್ಗಳು, ಸುಂದರ ಪರಿಸರ ಪ್ರವಾಸಿಗರನ್ನು ಇನ್ನಿಲ್ಲದಂತೆ ಆಕರ್ಷಿಸುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.