ನವದೆಹಲಿ: ದೇಶದಲ್ಲಿ ಮುಂದಿನ ತಲೆಮಾರಿನ ಐಟಿ ಕಾರ್ಯಪಡೆಯನ್ನು ನಿರ್ಮಾಣ ಮಾಡುವ ಸಲುವಾಗಿ ಎನ್ಐಐಟಿಯು ದೇಶದಾದ್ಯಂತ ಇಂಡಿಯಾಸ್ ನೆಕ್ಸ್ಟ್ ಟೆಕ್ ಸ್ಟಾರ್ ಅಭಿಯಾನವನ್ನು ಆರಂಭಿಸಿದೆ.
ದೇಶದಾದ್ಯಂತ ಇರುವ ಪ್ರತಿಭೆಗಳ ಬೇಟೆ ಕಾರ್ಯಕ್ರಮ ಇದಾಗಿದ್ದು, ಮುಂದಿನ ಆರು ತಿಂಗಳು ಸಾವಿರಾರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲಿದೆ. ಈ ಮೂಲಕ ಮುಂದಿನ ತಲೆಮಾರಿನ ಟೆಕ್ನಾಲಾಜಿಕಲ್ ಆಪ್ಲಿಕೇಶನ್ನನ್ನು ಅಭಿವೃದ್ಧಿಪಡಿಸಲಿದೆ.
2017ರ ನವೆಂಬರ್ನಲ್ಲಿ 25 ಶಾರ್ಟ್ಲಿಸ್ಟ್ ಪ್ರಾಜೆಕ್ಟ್ಗಳನ್ನು ಇಂಡಿಯಾಸ್ ನೆಕ್ಸ್ಟ್ ಟೆಕ್ ಸ್ಟಾರ್ ಎಂದು ವಿಶ್ವಕ್ಕೆ ತೋರಿಸಲು ಎನ್ಐಐಟಿ ನಿರ್ಧರಿಸಿದೆ.
ದೇಶದ 250 ಎನ್ಐಐಟಿ ಸೆಂಟರ್ಗಳಿಂದ ಬಂದ 25 ಶಾರ್ಟ್ಲಿಸ್ಟ್ ಪ್ರಾಜೆಕ್ಟ್ಗಳನ್ನು ಟೆಕ್ ದಿಗ್ಗಜರು ಮತ್ತು ಇಂಡಸ್ಟ್ರಿ ನಾಯಕರುಗಳನ್ನೊಳಗೊಂಡ ಪ್ರಮುಖ ಜೂರಿಗಳ ಮುಂದೆ ಪ್ರದರ್ಶಿಸಲಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.