ಮುಂಬಯಿ: ಕೆನಡಾದ ಪಾಪ್ ಗಾಯಕ ಜಸ್ಟಿನ್ ಬೀಬರ್ನ ಸಂಗೀತ ಕಾರ್ಯಕ್ರಮ ನಡೆದ ಮುಂಬಯಿನ ಡಿವೈ ಪಾಟೀಲ್ ಸ್ಟೇಡಿಯಂ ಅಕ್ಷರಶಃ ಕೊಳಚೆ ಪ್ರದೇಶದಂತಾಗಿದೆ. 5 ಸಾವಿರ ರೂಪಾಯಿಯಿಂದ 75 ಸಾವಿರದವರೆಗೆ ಹಣ ಪಾವತಿಸಿ ಆತನ ಕಾರ್ಯಕ್ರಮ ನೋಡಲು ಬಂದ ವಿದ್ಯಾವಂತ ಸಿರಿವಂತರು ಸ್ವಚ್ಛತೆಯ ಕನಿಷ್ಠ ಜ್ಞಾನವೂ ಇಲ್ಲದಂತೆ ವರ್ತಿಸಿದ್ದಾರೆ.
ಬೀಬರ್ನ ಯುವ ಅಭಿಮಾನಿಗಳು ಬಿರಿಯಾನಿ, ಫ್ರೈಡ್ ರೈಸ್, ಇತರ ಜಂಕ್ ಫುಡ್ಗಳನ್ನು ತಂದು ಸ್ಟೇಡಿಯಂನಲ್ಲೇ ತಿಂದು ಮಿಕ್ಕುಳಿದುದನ್ನು ಅಲ್ಲೇ ಬಿಸಾಕಿದ್ದಾರೆ. ಪೋಸ್ಟರ್, ಕಾಗದಗಳೂ ಅಲ್ಲೇ ಬಿದ್ದಿವೆ. ಇದರಿಂದ ಪಾದಾಚಾರಿಗಳಿಗೆ ನಡೆದಾಡಲೂ ಕಷ್ಟವಾಗುತ್ತದೆ.
ಫೇಸ್ಬುಕ್, ಟ್ವಿಟರ್ಗಳಲ್ಲಿ ದೊಡ್ಡ ಕ್ರಾಂತಿಕಾರಿಗಳಂತೆ ಫೋಸು ನೀಡುವ ಈ ಸಿರಿವಂತ ಯುವಕರು ದೇಶದ ಸ್ವಚ್ಛತೆಯತ್ತ ಒಂದಿಷ್ಟು ಕಾಳಜಿಯಿಲ್ಲದಂತೆ ವರ್ತಿಸಿದ್ದು ನಿಜಕ್ಕೂ ಸಾರ್ವಜನಿಕರಲ್ಲಿ ಆಕ್ರೋಶ ಮೂಡಿಸಿದೆ.
ಆದರೆ ಮಾಧ್ಯಮದವರು ಜಸ್ಟಿನ್ ಬೀಬರ್ ಮತ್ತು ಅವನ ಕಾರ್ಯಕ್ರಮಕ್ಕೆ ಪ್ರಚಾರ ನೀಡಿದಷ್ಟು ಆತನ ಅಭಿಮಾನಿಗಳು ಸೃಷ್ಟಿಸಿದ ಕೊಳಚೆಯನ್ನು ತೋರಿಸಿಲ್ಲ. ಆದರೆ ಹಲವಾರು ಮಂದಿ ಬೀಬರ್ನ ಅಭಿಮಾನಿಗಳ ಬೇಜವಾಬ್ದಾರಿ ನಡವಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿ, ಈ ವರ್ತನೆಯನ್ನು ಕಟುವಾಗಿ ಖಂಡಿಸಿದ್ದಾರೆ.
ನವಿ ಮುಂಬಯಿ ಮುನ್ಸಿಪಲ್ ಕಾರ್ಪೋರೇಶನ್ನ ಸ್ವಚ್ಛತಾ ಕಾರ್ಮಿಕರು ಇದೀಗ ಬೀಬರ್ನ ಅಭಿಮಾನಿಗಳು ಸೃಷ್ಟಿದ ಕೊಳಚೆಯನ್ನು ಸ್ವಚ್ಛ ಮಾಡುವ ಕಾಯಕವನ್ನು ಮಾಡುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.