ಮಾನ್ಸಾ : ಹುತಾತ್ಮ ಯೋಧರ ಕುಟುಂಬಿಕರಿಗೆ ಹಣಕಾಸು ನೆರವು ನೀಡುವ ‘ಭಾರತ್ ಕೆ ವೀರ್’ ವೆಬ್ಸೈಟ್ ಆರಂಭಕ್ಕೆ ಮುನ್ನುಡಿ ಬರೆದ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರಿಂದ ಪ್ರೇರಣೆ ಪಡೆದ ಪಂಜಾಬ್ನ ಯುವ ಐಎಎಸ್ ಅಧಿಕಾರಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಿಕರ ನೆರವಿಗಾಗಿ ವೆಬ್ಸೈಟ್ವೊಂದನ್ನು ಆರಂಭಿಸಲು ತಯಾರಿ ನಡೆಸುತ್ತಿದ್ದಾರೆ.
ಪಂಜಾಬಿನ ಮಾನ್ಸಾ ಜಿಲ್ಲೆಯಲ್ಲಿ 2015ರ ಜುಲೈ ಬಳಿಕ ಒಟ್ಟು 400 ರೈತರ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿದೆ. ಸಾಲಭಾದೆ, ಬೆಳೆ ಕೈಕೊಟ್ಟ ಪರಿಣಾಮವಾಗಿ ಇವರು ನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಅವರನ್ನು ಕಳೆದುಕೊಂಡ ಅವರ ಕುಟುಂಬ ಅನಾಥವಾಗಿರುವುದು ಮಾತ್ರವಲ್ಲ ತೀವ್ರ ಆರ್ಥಿಕ ಮುಗ್ಗಟ್ಟನ್ನು ಎದುರಿಸುತ್ತಿದೆ.
ಇದೀಗ ಇವರ ರಕ್ಷಣೆ ಧಾವಿಸಿರುವ ಮಾನ್ಸಾದ ಹೆಚ್ಚುವರಿ ಉಪ ಆಯುಕ್ತ(ಎಡಿಸಿ) ಸನ್ಯಾಂ ಅಗರ್ವಾಲ್ ‘ಭಾರತ್ ಕೆ ವೀರ್’ ಮಾದರಿಯ ವೆಬ್ಸೈಟ್ವೊಂದನ್ನು ರೈತರಿಗಾಗಿ ಆರಂಭಿಸಲು ಮುಂದಾಗಿದ್ದಾರೆ. ಭಾರತ್ ಕೆ ವೀರ್ ವೆಬ್ಸೈಟ್ ಮಾದರಿಯಲ್ಲೇ ಇದು ಇರಲಿದೆ.
‘www.debtfreepunjab.com’ ಎಂದು ವೆಬ್ಸೈಟ್ಗೆ ಹೆಸರಿಡಲಾಗಿದ್ದು, ಮಾನ್ಸಾದಲ್ಲಿ ಆತ್ಮಹತ್ಯೆ ಮಾಡಿಕೊಂಡ ಎಲ್ಲಾ ರೈತರ ಮತ್ತು ಅವರ ಕುಟುಂಬದವರ ಮಾಹಿತಿಗಳು ಇದರಲ್ಲಿ ಇರಲಿದ್ದು, ಅಕೌಂಟ್ ನಂಬರ್ನ್ನೂ ಹಾಕಲಾಗುತ್ತದೆ. ಅವರಿಗೆ ಹಣಕಾಸು ನೆರವು ನೀಡ ಬಯಸುವವರು ಅವರ ಖಾತೆಗೆ ನೇರವಾಗಿ ಹಣ ವರ್ಗಾವಣೆ ಮಾಡಬಹುದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.