ನವದೆಹಲಿ: ನೆನೆಗುದಿದೆ ಬಿದ್ದಿದ್ದ ಮೂಲಸೌಕರ್ಯ ಯೋಜನೆಗಳನ್ನು ಉತ್ತೇಜಿಸಲು ಪ್ರಧಾನಿ ನರೇಂದ್ರ ಮೋದಿಯವರು ಮಾಡುತ್ತಿರುವ ಪ್ರಯತ್ನಗಳು ಇದೀಗ ಫಲ ನೀಡಲು ಆರಂಭಿಸಿದೆ.
ನೆನೆಗುದಿಗೆ ಬಿದ್ದಿದ್ದ 16.9 ಟ್ರಿಲಿಯನ್ ರೂಪಾಯಿಗಳ 1,201ಯೋಜನೆಗಳಲ್ಲಿ ಇದೀಗ ತೀವ್ರಗತಿಯಲ್ಲಿ ಕಾರ್ಯ ಮಾಡುತ್ತಿದೆ. 2 ವರ್ಷಗಳಲ್ಲಿ ಸಾಕಷ್ಟು ಯೋಜನೆಗಳು ಮುಕ್ತಾಯದ ಹಂತವನ್ನು ತಲುಪಿದೆ.
2014ರ ಮೇನಲ್ಲಿ ಅಧಿಕಾರಕ್ಕೆ ಬಂದ ಬಳಿಕ ಮೋದಿ ಮೂಲಸೌಕರ್ಯ ಯೋಜನೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ, ಸಚಿವರುಗಳಿಗೆ ಟಾರ್ಗೆಟ್ ನೀಡುತ್ತಿದ್ದಾರೆ, ಎದುರಾಗುವ ಸಮಸ್ಯೆಯನ್ನು ನಿವಾರಿಸಲು ಕ್ರಮಕೈಗೊಳ್ಳುತ್ತಿದ್ದಾರೆ. ಮಾತ್ರವಲ್ಲ ವಿದೇಶಿ ಕಂಪನಿಗಳಿಗೆ ಭಾರತದಲ್ಲಿ ಕೈಗಾರಿಕೆ ಸ್ಥಾಪಿಸಲು ಉತ್ತೇಜನ ನೀಡುತ್ತಿದ್ದಾರೆ.
ಹಣಕಾಸು ಸಮಸ್ಯೆ, ಭೂ ಸ್ವಾಧೀನ ಸಮಸ್ಯೆ, ಪರಿಸರ ಇಲಾಖೆ ಸಮ್ಮತಿಗಳಿಂದಾಗಿ ರೈಲ್ವೇ, ಪೆಟ್ರೋಲಿಯಂ, ರಸ್ತೆಗಳ ಯೋಜನೆಗಳಲ್ಲಿ ವಿಳಂಬವಾಗುತ್ತಿದೆ. ಆದರೆ ಸರ್ಕಾರ ತೆಗೆದುಕೊಂಡಿರುವ ನಿರ್ಧಾರ ತೆಗೆದುಕೊಳ್ಳುವ ನಿಯೋಗ ರಚನೆ, ಡೆಡ್ಲೈನ್ ನೀಡುವಿಕೆ, ಗುತ್ತಿಗೆ ನಿಯಮದಲ್ಲಿ ಸುಧಾರಣೆಯಂತಹ ಕ್ರಮಗಳನ್ನು ಯೋಜನೆಗಳನ್ನು ತ್ವರಿತವಾಗಿ ಮುನ್ನಡೆಯುವಂತೆ ಮಾಡುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.