ಮರವನ್ನು ಉಳಿಸಿ ಎಂದು ರಾಜಕಾರಣಿಗಳು ಭಾಷಣ ಮಾಡುವುದನ್ನು ಮಾತ್ರ ಇದುವರೆಗೆ ನಾವು ನೋಡಿದ್ದೇವೆ. ಆದರೆ ಆಂಧ್ರದ ಟಿಡಿಪಿ ಪಕ್ಷದ ಶಾಸಕರೊಬ್ಬರು ಮರವೊಂದನ್ನು ಉಳಿಸಿಕೊಳ್ಳುವ ಸಲುವಾಗಿ ಬುಡಸಮೇತ ಅದನ್ನು ಕಿತ್ತು ಇನ್ನೊಂದೆಡೆ ನೆಡುವ ಕಾರ್ಯ ಮಾಡಿದ್ದಾರೆ.
ವಿಜಯವಾಡ-ಮಚಲಿಪಟ್ಟಣಂ ಹೆದ್ದಾರಿಯನ್ನು ಅಗಲಗೊಳಿಸುವ ಪ್ರಕ್ರಿಯೆಗಾಗಿ ನಾಲ್ಕು ಅಶ್ವಥದ ಮರಗಳು ನೆಲಕ್ಕೆ ಉರುಳಲಿದ್ದವು. ಆದರೆ ಅದನ್ನು ಸಂರಕ್ಷಿಸಲು ಮುಂದೆ ಬಂದ ಪೆನಮಲೂರ್ ಶಾಸಕ ಬೊಡೆ ಪ್ರಸಾದ್ ಅವರು ತಮ್ಮ ಸ್ವಂತ ಖರ್ಚಿನಲ್ಲಿ ಮರವನ್ನು ಬುಡ ಸಮೇತ ಕಿತ್ತು ತಡಿಗಡಪ ಬ್ರಿಡ್ಜ್ ಸಮೀಪ ಈ ಮರಗಳಿಗೆ ಬೇಕಾದಷ್ಟು ಹೊಂಡ ಮಾಡಿ ಅಲ್ಲಿ ಅದನ್ನು ನೆಡುವ ಕಾರ್ಯ ಮಾಡಿದ್ದಾರೆ.
ಕ್ರೇನ್ ಅರೇಂಜ್ ಮಾಡುವುದರಿಂದ ಹಿಡಿದು ಕಾರ್ಮಿಕರನ್ನು ಒಟ್ಟುಗೂಡಿಸಿ ಮರಗಳನ್ನು ನೆಡುವ ತನಕದ ಎಲ್ಲಾ ಕಾರ್ಯಗಳನ್ನೂ ಪ್ರಸಾದ್ ಅವರೇ ಮುತುವರ್ಜಿ ವಹಿಸಿಕೊಂಡು ಮಾಡಿದ್ದಾರೆ.
ಮೊದಲು ಈ ಮರಗಳ ಕೆಲವೊಂದು ರೆಂಬೆಗಳನ್ನು ಕಿತ್ತು, ಅವುಗಳ ಬೇರುಗಳಿಗೆ ಒಂದಿಷ್ಟು ಹಾನಿಯಾಗಂದತೆ ತುಂಬಾ ಕಾಳಜಿಯಿಂದ ಕಿತ್ತು ಬಳಿಕ ಶಿಫ್ಟ್ ಮಾಡಲಾಯಿತು.
ನನ್ನ ಬಾಲ್ಯದಿಂದಲೂ ಈ ಮರಗಳನ್ನು ನಾನು ನೋಡುತ್ತಿದ್ದೇನೆ, ಅವುಗಳು ಹೆದ್ದಾರಿಗಾಗಿ ಉರುಳಲಿವೆ ಎಂಬುದನ್ನು ತಿಳಿದು ನನಗೆ ತುಂಬಾ ಬೇಸರವಾಯಿತು. ಅದಕ್ಕಾಗಿ ಅವುಗಳನ್ನು ಸ್ಥಳಾಂತರಿಸುವ ನಿರ್ಧಾರಗಳನ್ನು ತೆಗೆದುಕೊಂಡೆ ಎಂದು ಪ್ರಸಾದ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.