ಸೌದಿ: ಲಿಂಗ ಪ್ರತ್ಯೇಕತೆ ಮತ್ತು ಪುರುಷ ದಬ್ಬಾಳಿಕೆ ಪದ್ಧತಿ ಸೌದಿ ಅರೇಬಿಯಾದಲ್ಲಿ ಸುಧೀರ್ಘ ಕಾಲದಿಂದಲೂ ನಡೆಯುತ್ತಾ ಬಂದಿದೆ. ಈ ಸಂಪ್ರದಾಯವಾದಿ ರಾಜಾಡಳಿತದಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯಲು ಅಥವ ಕೆಲಸಕ್ಕೆ ಹೋಗಲೂ ಮಹಿಳೆಯರಿಗೆ ಸ್ವಾತಂತ್ರ್ಯವಿಲ್ಲ. ತಮ್ಮ ತಂದೆ ಅಥವಾ ಗಂಡನಿಂದ ಅನುಮತಿಯನ್ನು ಪಡದೇ ಅವರು ಕಾರ್ಯಗಳನ್ನು ಮಾಡಬೇಕು.
ಇದೀಗ ಮಹಿಳೆಯರನ್ನು ಭಾದಿಸುವ ಈ ಕಾನೂನನ್ನು ಬದಲಾಯಿಸಲು ಅಲ್ಲಿನ ದೊರೆ ಸಲ್ಮಾನ್ ಬಿನ್ ಅಬ್ದುಲಾಝಿಜ್ ಮುಂದಾಗಿದ್ದು, ಅದಕ್ಕಾಗಿ ಮೇ೪ರಂದು ಪುರುಷ ರಕ್ಷಕತ್ವದ ಪದ್ಧತಿಯನ್ನು ತೆಗೆದುಹಾಕಲು ರಾಜ ತೀರ್ಪನ್ನು ಪ್ರಕಟಿಸಿದ್ದಾರೆ.
ಈ ನೂತನ ರಾಜ ತೀರ್ಪನನ್ವಯ ಮಹಿಳೆಯರು ಪುರುಷರ ಅನುಮತಿಯಿಲ್ಲದೆಯೇ ವೈದ್ಯಕೀಯ ಚಿಕಿತ್ಸೆ ಪಡೆಯಬಹುದು, ವಿದ್ಯಾಭ್ಯಾಸ ಮಾಡಬಹುದು, ಸರ್ಕಾರಿ ಉದ್ಯೋಗ ಮಾಡಬಹುದು ಮತ್ತು ನ್ಯಾಯಾಲಯದಲ್ಲಿ ತಮ್ಮನ್ನು ಪ್ರತಿನಿಧಿಸಿಕೊಳ್ಳಬಹುದು.
ಮೂರು ತಿಂಗಳೊಳಗೆ ಪುರುಷ ರಕ್ಷಕತ್ವ ಪದ್ಧತಿಯನ್ನು ತೆಗೆದು ಹಾಕುವಂತೆ ಮತ್ತು ತಮ್ಮ ಅಧಿಕೃತ ವೆಬ್ಸೈಟ್ಗಳಲ್ಲಿ ಈ ಬಗ್ಗೆ ಹಾಕುವಂತೆ ಸಲ್ಮಾನ್ ರಾಜಾಜ್ಞೆಯಲ್ಲಿ ಸೂಚಿಸಿದ್ದಾರೆ.
ಕಾರ್ಯಶಕ್ತಿಯಲ್ಲಿ ಮಹಿಳೆಯರನ್ನು ಒಳಪಡಿಸಿ ಆ ಮೂಲಕ ದೇಶದ ಆರ್ಥಿಕತೆಯನ್ನು ಮುಂದೆ ಕೊಂಡೊಯ್ಯುವ ಸಲುವಾಗಿ ಈ ಆದೇಶ ಹೊರಡಿಸಲಾಗಿದೆ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.