ಕೋಲ್ಕತ್ತಾ: ಕೇಂದ್ರ ಸರ್ಕಾರ ಬರೋಬ್ಬರಿ 10 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಆಳ ಸಾಗರ ಯೋಜನೆಯನ್ನು ಆರಂಭಿಸಲು ಮುಂದಾಗಿದೆ. ಸಾಗರದ ಸಂಪನ್ಮೂಲಗಳನ್ನು ಅತ್ಯಂತ ಜವಾಬ್ದಾರಿಯುತ ರೀತಿಯಲ್ಲಿ ಬಳಸಿಕೊಳ್ಳುವ ಸಲುವಾಗಿ ಈ ಯೋಜನೆಯನ್ನು ಆರಂಭಿಸಲಾಗುತ್ತಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಭೂ ವಿಜ್ಞಾನ ಸಚಿವಾಲಯದ ಕಾರ್ಯದರ್ಶಿ ಮಾಧವನ್ ನಾಯರ್ ರಾಜೀವನ್ ಅವರು, ‘ಆಳ ಸಾಗರ ಸಂಶೋಧನಾ ಕೇಂದ್ರ ಸ್ಥಾಪನೆಯಾಗಲಿದೆ. ಆಳ ಸಾಗರ ಯೋಜನೆಯನ್ನೂ ಆರಂಭಿಸಲಿದ್ದೇವೆ. ಇದಕ್ಕಾಗಿ ನಮ್ಮ ಸಚಿವಾಲಯ ಪ್ರಸ್ತಾವಣೆಯನ್ನು ಸಿದ್ಧಪಡಿಸುತ್ತಿದೆ. ಈ ಪ್ರಸ್ತಾವಣೆಯನ್ನು ಅನುಮೋದನೆಗಾಗಿ ಸಂಪುಟದ ಮುಂದೆ ಇಡಲಿದ್ದೇವೆ’ ಎಂದಿದ್ದಾರೆ.
‘ಇದು ಕೇವಲ ನಮ್ಮ ಸಚಿವಾಲಯವನ್ನು ಒಳಗೊಂಡಿಲ್ಲ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಬಯೋಟೆಕ್ನಾಲಜಿ ಇಲಾಖೆಯೂ ಇದರಲ್ಲಿ ಭಾಗಿಯಾಗಲಿದೆ’ ಎಂದರು.
ಈ ಯೋಜನೆಯೂ ಆಳ ಸಾಗರ ಶಕ್ತಿ, ಆಳ ಸಾಗರ ವಿಜ್ಞಾನ, ಮೀನುಗಾರಿಗೆ ಚೆನ್ನೈ ಕರಾವಳಿಯಾದ್ಯಂತ ಡೀಸಲೀಕರಣ ಘಟಕ, ಖನಿಜಗಳು ಮತ್ತು ಪಾಲಿಮೆಟಲಿಕ್ ನಡೂಲ್ಸ್ ಮುಂತಾದ ಪ್ರಮುಖ ಅಂಶಗಳನ್ನು ಒಳಗೊಳ್ಳಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.