ಇಂದೋರ್: ಶಾಲೆಗೆ ಹೋಗುವ ವಿದ್ಯಾರ್ಥಿಗಳ ತಂಡವೊಂದು ಇಂದೋರ್ನ ಪಲಸಿಯ ಪ್ರದೇಶದಲ್ಲಿ ‘ಫುಡ್ ಬ್ಯಾಂಕ್ ಎಟಿಎಂ’ನ್ನು ಸ್ಥಾಪನೆ ಮಾಡಿದೆ. ಈ ಮೂಲಕ ಹಸಿದವರ ಹೊಟ್ಟೆಯನ್ನು ತಣಿಸುವ ಮಹತ್ವದ ಕಾರ್ಯವನ್ನು ವಿದ್ಯಾರ್ಥಿಗಳು ಮಾಡಿದ್ದಾರೆ.
ಈ ಫುಡ್ ಎಟಿಎಂನಲ್ಲಿ ಆಹಾರಗಳನ್ನು ರೆಫ್ರಿಜರೇಟರ್ನಲ್ಲಿ ಸಂಗ್ರಹಿಸಿಡಲಾಗುತ್ತದೆ. ಎನ್ಜಿಓವೊಂದು ಹೋಟೆಲ್, ರೆಸ್ಟೋರೆಂಟ್ಗಳಲ್ಲಿ ಮಿಕ್ಕುಳಿದ ಆಹಾರವನ್ನು ಸಂಗ್ರಹಿಸಿ ಇಲ್ಲಿ ಇಡುತ್ತದೆ. ಹಸಿದವರಿಗೆ, ಅಗತ್ಯ ಇರುವವರಿಗೆ ಇಲ್ಲಿ ಸಂಗ್ರಹಿಸಲಾದ ಆಹಾರವನ್ನು ನೀಡಲಾಗುತ್ತದೆ.
ಹಾರ್ದಿಕ್ ಕಟಾರಿಯಾ ಮತ್ತು ಆತನ ಐವರು ಆತನ ವಿದ್ಯಾರ್ಥಿಗಳು ಸೇರಿ ಈ ಫುಡ್ ಎಟಿಎಂನ್ನು ಸ್ಥಾಪಿಸಿದ್ದಾರೆ. ಇವರೆಲ್ಲರೂ 11ನೇ ತರಗತಿ ವಿದ್ಯಾರ್ಥಿಗಳಾಗಿದ್ದಾರೆ.
ಹುಟ್ಟುಹಬ್ಬದಂದು ಕುಟುಂಬದೊಂದಿಗೆ ಹೋಟೆಲ್ ಹೋಗಿದ್ದ ಹಾರ್ದಿಕ್ಗೆ ಅಲ್ಲಿ ತಿಂದು ಮಿಕ್ಕುಳಿದ ಆಹಾರವನ್ನು ಯಾರಿಗಾದರು ಕೊಡಬೇಕೆಂದು ಪ್ಯಾಕ್ ಮಾಡಿಸಿ ತಂದ, ಆದರೆ ಅದನ್ನು ನೀಡಲು ಆತನಿಗೆ ರಾತ್ರಿ ವೇಳೆ ಯಾರೂ ಸಿಗಲಿಲ್ಲ. ಆಹಾರ ಹಾಳಾಗಿ ಹೋಯಿತು. ಬಳಿಕ ಈ ಫುಡ್ ಎಟಿಎಂ ಯೋಚನೆ ಆತನ ತಲೆಗೆ ಬಂದು ಸ್ನೇಹಿತರೊಂದಿಗೆ ಕೂರತು ಚರ್ಚಿಸಿದ. ಇದರ ಫಲವಾಗಿಯೇ ಪಲಸಿಯದಲ್ಲಿ ಫುಡ್ ಎಟಿಎಂ ಸ್ಥಾಪನೆಗೊಂಡಿತು.
ಹಲವರು ಬಂದು ಇಲ್ಲಿ ಫುಡ್ ನೀಡುತ್ತಾರೆ, ಹಲವರು ತಿಂದು ಹೋಗುತ್ತಾರೆ. ಕಟ್ಟಡದ ಸೆಕ್ಯೂರಿಟಿ ಗಾರ್ಡ್ ಅವರೇ ಇದರ ಕಾವಲನ್ನೂ ಕಾಯುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.