ನವದೆಹಲಿ: ಕೇಂದ್ರದ ಮಹತ್ವಾಕಾಂಕ್ಷೆಯ ‘ಪ್ರಧಾನ ಮಂತ್ರಿ ಉಜ್ವಲ ಯೋಜನೆ’ಯ ಬಗ್ಗೆ ಫಲಾನುಭವಿಗಳು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಈ ಯೋಜನೆ ಅವರ ಬದುಕನ್ನೇ ಬದಲಾಯಿಸಿದೆ.
ಫಿನಾನ್ಶಿಯಲ್ ಕನ್ಸಲ್ಟಿಂಗ್ ಫರ್ಮ್ ’ಮೈಕ್ರೋಸೇವ್’ ಪೂರ್ವ, ಮಧ್ಯ ಮತ್ತು ಪಶ್ಚಿ ಉತ್ತರಪ್ರದೇಶದಲ್ಲಿ ಸಮೀಕ್ಷೆ ನಡೆಸಿದ್ದು, ಯೋಜನೆಯ ಫಲಾನುಭವಿಗಳು ಸಂತೋಷದಿಂದ ಅಡುಗೆ ಅನಿಲದ ಮೂಲಕ ಅಡುಗೆ ಮಾಡುತ್ತಿದ್ದು, ಕಟ್ಟಿಗೆಗಳನ್ನು ತೊರೆದಿದ್ದಾರೆ ಎಂಬುದನ್ನು ತಿಳಿಸಿದೆ.
ನಾವೀಗ ಎಂದಿಗಿಂತ ಆರೋಗ್ಯಕರವಾಗಿದ್ದೇವೆ, ಮನೆಗಳು ಸ್ವಚ್ಛವಾಗಿದೆ ಮತ್ತು ನಮಗಾಗಿ ಹೆಚ್ಚಿನ ಸಮಯಗಳು ನಮಗೀಗ ದೊರಕುತ್ತಿದೆ. ದಿನಕ್ಕೆ ಕನಿಷ್ಠವೆಂದರೆ 1ರಿಂದ 2 ಗಂಟೆಗಳು ನಮಗೆ ಉಳಿತಾಯವಾಗುತ್ತಿದೆ ಎಂದು ಫಲಾನುಭವಿಗಳು ಹೇಳಿಕೊಂಡಿದ್ದಾರೆ.
ಗ್ಯಾಸ್ ಅಡುಗೆ ತುಂಬಾ ವೇಗವಾಗಿ ಆಗುತ್ತದೆ, ಇದರಿಂದಾಗಿ ಹೊರಗೆ ಹೋಗಿ ಕಟ್ಟಿಗೆ ಸಂಗ್ರಹಿಸುವ ಜಂಜಾಟವೂ ನಮಗೆ ತಪ್ಪಿದೆ ಎಂದು ಅವರು ಹೇಳಿದ್ದಾರೆ.
ಉಜ್ಜಲ ಯೋಜನೆಯನ್ನು ಬಿಪಿಎಲ್ ಕುಟುಂಬಗಳ ಮಹಿಳೆಯರಿಗೆಂದೇ ಪ್ರಧಾನಿ ನರೇಂದ್ರ ಮೋದಿಯವರು 2016ರ ಮೇ 1ರಂದು ಆರಂಭಿಸಿದ್ದರು. ಉಚಿತ ಅಡುಗೆ ಅನಿಲ ವಿತರಿಸುವ ಯೋಜನೆ ಇದಾಗಿದೆ. ಇದರನ್ವಯ ಈಗಾಗಲೇ ದೇಶದ ಕೋಟ್ಯಾಂತರ ಕುಟುಂಬಗಳು ಅಡುಗೆ ಅನಿಲ ಸೌಲಭ್ಯವನ್ನು ಪಡೆದುಕೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.