ನವದೆಹಲಿ: ಇ-ಕಾಮರ್ಸ್ ಪೋರ್ಟಲ್ ಅಮೇಝಾನ್ ಕೆನಡಾ ಜಮ್ಮು ಕಾಶ್ಮೀರವಿಲ್ಲದ ಭಾರತದ ಭೂಪಟವನ್ನು ತನ್ನ ಪೋರ್ಟಲ್ನಲ್ಲಿ ಹಾಕಿದ್ದು ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದೆ.
ಬಿಜೆಪಿ ನಾಯಕ ತೇಜೆಂದರ್ ಪಾಲ್ ಎಸ್ ಬಗ್ಗ ಅವರು ಈ ಬಗ್ಗೆ ಟ್ವಿಟರ್ನಲ್ಲಿ ಲಿಂಕ್ ಪೋಸ್ಟ್ ಮಾಡಿದ ಬಳಿಕ ಈ ಘಟನೆ ಭಾರತದಲ್ಲಿ ಬೆಳಕಿಗೆ ಬಂದಿದೆ.
ಇದು ಎರಡನೇ ಸಲ ಅಮೇಝಾನ್ ಭಾರತೀಯರ ಕೆಂಗಣ್ಣಿಗೆ ಗುರಿಯಾಗುತ್ತಿರುವುದು. ಈ ಹಿಂದೆ ಅದು ತ್ರಿವರ್ಣ ಧ್ವಜದ ಬಣ್ಣಗಳಿರುವ ಡೋರ್ಮ್ಯಾಟ್ನ್ನು ತನ್ನ ವೆಬ್ಸೈಟ್ನಲ್ಲಿ ಹಾಕಿ ಭಾರತೀಯರನ್ನು ಕೆಣಕಿತ್ತು.
ಇದೀಗ ವಿನ್ಯಲ್ ವಾಲ್ ಸ್ಟಿಕರ್ನ್ನು ಭಾರತದ ತಪ್ಪು ಭೂಪಟದೊಂದಿಗೆ ತನ್ನ ಪ್ರೊಡಕ್ಟ್ ಡಿಸ್ಕ್ರಿಪಶನ್ನಲ್ಲಿ ತೋರಿಸಿ ದೊಟ್ಟ ತಪ್ಪು ಮಾಡಿದೆ.
ತಕ್ಷಣ ಈ ಚಿತ್ರವನ್ನು ಅಮೇಝಾನ್ ಅಳಿಸಿ ಹಾಕಬೇಕು ಎಂದು ಬಗ್ಗಾ ಅವರು ಆಗ್ರಹಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.