ನವದೆಹಲಿ: ನಕ್ಸಲರನ್ನು ಹತ್ತಿಕ್ಕುವ ಸಲುವಾಗಿ ಛತ್ತೀಸ್ಗಢ ಮುಖ್ಯಮಂತ್ರಿ ರಮಣ್ ಸಿಂಗ್ ವರು ’ಮಿಶನ್ ಸುಕ್ಮಾ’ ವನ್ನು ಆರಂಭಿಸಿದ್ದಾರೆ.
ನಕ್ಸಲರ ವಿರುದ್ಧ ವಾಯು ಸಾಮರ್ಥ್ಯ ಬಳಕೆ, ನಕ್ಸಲ್ ನಾಯಕರನ್ನು ಟಾರ್ಗೆಟ್ ಮಾಡಿ ದಾಳಿ ನಡೆಸುವುದು, ನಕ್ಸಲ್ ಪೀಡಿತ ಪ್ರದೇಶದಲ್ಲಿ ನಿರಂತರ ಅಭಿವೃದ್ಧಿ ಕಾರ್ಯ ಮತ್ತು ಎಡಪಂಥೀಯ ಉಗ್ರರನ್ನು ಸಂಪೂರ್ಣ ನಾಶ ಮಾಡುವ ಗುರಿಯನ್ನು ‘ಮಿಶನ್ ಸುಕ್ಮಾ’ ಒಳಗೊಂಡಿದೆ.
ಯೂನಿಫೈಡ್ ಕಮಾಂಡ್ ಸ್ಟ್ರಕ್ಚರ್ಗೆ ಬದಲಾವಣೆ ತರುವುದು ಮತ್ತು ನಕ್ಸಲ್ ವಿರೋಧಿ ಕಾರ್ಯಾಚರಣೆಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಅವಕಾಶ ಕೊಡಲಾಗುತ್ತದೆ ಎಂದು ರಮಣ್ ಸಿಂಗ್ ಹೇಳಿದ್ದಾರೆ.
ಸುಕ್ಮಾ ನಕ್ಸಲರ ಹೃದಯ ಭಾಗವಾಗಿದ್ದು, ಸುಕ್ಮಾವನ್ನು ಈ ಸಮಸ್ಯೆಯಿಂದ ಹೊರ ತರಲು ನಾವು ‘ಸುಕ್ಮಾ ಮಿಶನ್’ನನ್ನು ಸಮರ್ಥವಾಗಿ ಇಲ್ಲಿಗೆ ಅನುಷ್ಠಾನಕ್ಕೆ ತರಬೇಕು ಎಂದು ಅವರು ಹೇಳಿದ್ದಾರೆ.
ಇತ್ತೀಚಿಗೆ ಸುಕ್ಮಾದಲ್ಲಿ ನಕ್ಸಲರು 25 ಮಂದಿ ಸಿಆರ್ಪಿಎಫ್ ಯೋಧರನ್ನು ಹತ್ಯೆ ಮಾಡಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.