ನವದೆಹಲಿ: ವಾಸ್ತವ ಗಡಿ ರೇಖೆಯ ಬಳಿಯ ಪಾಕಿಸ್ಥಾನಿ ಬಂಕರ್ವೊಂದನ್ನು ಭಾರತೀಯ ಸೈನಿಕರು ಮಿಸೈಲ್ ದಾಳಿ ನಡೆಸಿ ಧ್ವಂಸಗೊಳಿಸುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಈ ಘಟನೆ ಕಳೆದ ತಿಂಗಳು ನಡೆದಿದ್ದು, ಇದು ಯಾವ ಜಾಗದಲ್ಲಿ ನಡೆದಿದೆ ಎಂಬುದು ಸ್ಪಷ್ಟವಾಗಿ ತಿಳಿದು ಬಂದಿಲ್ಲ.
ಇಬ್ಬರು ಭಾರತೀಯ ಯೋಧರನ್ನು ಪಾಕಿಸ್ಥಾನ ಹತ್ಯೆ ಮಾಡಿ ಶಿರಚ್ಛೇಧ ಮಾಡಿದ ಬಳಿಕ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಇನ್ನಿಲ್ಲದಂತೆ ಹರಿದಾಡುತ್ತಿದೆ.
ಪಾಕ್ ಸೈನಿಕರ ಕದನವಿರಾಮ ಉಲ್ಲಂಘನೆ ಪ್ರತ್ಯುತ್ತರವಾಗಿ ಫೈರಿಂಗ್ ಮಾಡಿದ ಭಾರತೀಯ ಯೋಧರು ಅವರ ಬಂಕರ್ನ್ನು ಧ್ವಂಸಗೊಳಿಸುವ ದೃಶ್ಯ ಈ ವೀಡಿಯೋದಲ್ಲಿ ಸೆರೆಯಾಗಿದೆ,
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.