ಲಂಡನ್: ಭ್ರಷ್ಟಾಚಾರವನ್ನು ನಿರ್ಮೂಲನೆಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಮಾಡುತ್ತಿರುವ ಪ್ರಯತ್ನಗಳನ್ನು ಅನಿವಾಸಿ ಭಾರತೀಯ ಉದ್ಯಮಿ ಲಾರ್ಡ್ ಸ್ವರಾಜ್ ಪೌಲ್ ಶ್ಲಾಘಿಸಿದ್ದು, ಭ್ರಷ್ಟರ ಮನಸ್ಸಲ್ಲಿ ಕಾನೂನಿನ ಭಯ ಹುಟ್ಟಿಸುವಲ್ಲಿ ಅವರು ಸಫಲರಾಗಿದ್ದಾರೆ ಎಂದಿದ್ದಾರೆ.
ಮೋದಿ ಅತೀ ಬದ್ಧತೆಯ ವ್ಯಕ್ತಿಯಾಗಿದ್ದು, ಯಾವ ದಿಕ್ಕಿನತ್ತ ದೇಶವನ್ನು ಕೊಂಡೊಯ್ಯಬೇಕು ಎಂಬ ಸ್ಪಷ್ಟ ಜ್ಞಾನ ಅವರಿಗಿದೆ ಎಂದಿದ್ದಾರೆ.
‘ನೋಟು ನಿಷೇಧ ಒಂದು ಗಂಭೀರ ಪ್ರಯತ್ನ ಎಂಬುದನ್ನು ಜನ ಅರಿತಿದ್ದಾರೆ, ಇದರಿಂದ ಹಲವಾರು ಕಪ್ಪುಹಣಗಳು ಪತ್ತೆಯಾದವು. ಈಗ ಕಪ್ಪುಹಣದಲ್ಲಿ ಭಾಗಿಯಾಗುವ ಬಗ್ಗೆ ಭಯ ಹುಟ್ಟಿದೆ, ಇದರ ಪರಿಣಾಮಗಳ ಬಗ್ಗೆ ಜನ ಭಯಭೀತರಾಗಿದ್ದಾರೆ’ ಎಂದರು.
ಪೌಲ್ ಅವರು ಭಾರತದಲ್ಲಿ ೨೦ ಉತ್ಪಾದನ ಘಟಕಗಳನ್ನು ಹೊಂದಿರುವ ಕಪರೋ ಗ್ರೂಪ್ನ ಮಾಲೀಕರಾಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.