ಶಿಲ್ಲಾಂಗ್: ಈಶಾನ್ಯ ರಾಜ್ಯಗಳನ್ನು ಆಗ್ನೇಯ ಏಷ್ಯಾದ ಗೇಟ್ ವೇ ಮಾಡುವ ಗುರಿಯನ್ನು ಸರ್ಕಾರ ಹೊಂದಿದೆ ಮತ್ತು ಈ ಭಾಗದ ಸಮಗ್ರ ಅಭಿವೃದ್ಧಿಗಾಗಿ ಅತೀದೊಡ್ಡ ಮೊತ್ತವನ್ನು ಹೂಡಿಕೆ ಮಾಡಿದೆ. ಆದರೆ ಸ್ವಚ್ಛತೆಯ ಕೊರತೆಯಿಂದಾಗಿ ನಮ್ಮ ಕನಸಿಗೆ ಅಡೆತಡೆ ಉಂಟಾಗುವ ಸಾಧ್ಯತೆ ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಶಿಲ್ಲಾಂಗ್ನಲ್ಲಿ ಜರುಗಿದ ಭಾರತ್ ಸೇವಾಶ್ರಮ್ ಸಂಘಟನೆಯ ಶತಮಾನೋತ್ಸವ ಸಮಾರಂಭವನ್ನು ವೀಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
‘ಇಂತಹ ಸುಂದರ ಗೇಟ್ ವೇನಲ್ಲಿ ಸ್ವಚ್ಛತೆ ಇಲ್ಲದಿದ್ದರೆ, ಕಾಯಿಲೆ ಪೀಡಿತವಾಗಿದ್ದರೆ, ಅನಕ್ಷರಸ್ಥ, ಅಸಮತೋಲನದಿಂದ ಕೂಡಿದ್ದರೆ ದೇಶದ ಅಭಿವೃದ್ಧಿಯ ಗೇಟ್ ವೇಯನ್ನು ಕ್ರಾಸ್ ಮಾಡಲು ಅದು ವಿಫಲವಾಗಲಿದೆ. ಎಲ್ಲಾ ಸಂಪನ್ಮೂಲವನ್ನು ಹೊಂದಿದ್ದರೂ ಬಡವರು, ಹಿಂದುಳಿದವರಾಗಿಯೇ ಇದ್ದೇವೆ ಎಂಬುದಕ್ಕೆ ಕಾರಣಗಳೇ ಇಲ್ಲ’ ಎಂದರು.
ಜನರು ಮತ್ತು ಭಾರತ್ ಸೇವಾಶ್ರಮದಂತಹ ಸಂಘಟನೆಗಳು ಸರ್ಕಾರದೊಂದಿಗೆ ಕೈಜೋಡಿಸಿ ಅಭಿವೃದ್ಧಿ ಮತ್ತು ಸ್ವಚ್ಛತೆ ಮಾಡಬೇಕು ಎಂದು ಕರೆ ನೀಡಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.