ಮುಂಬಯಿ: ವಿಶ್ವದ ದಢೂತಿ ಮಹಿಳೆ ಎಂದು ಕರೆಯಲ್ಪಡುವ ಈಜಿಪ್ತ್ ಮೂಲದ ಎಮನ್ ಅಹ್ಮದ್ ಅವರ ವಿವಾದದ ಬಳಿಕ ಇದೀಗ ಮಹಾರಾಷ್ಟ್ರ ಸರ್ಕಾರ ವಿದೇಶದಿಂದ ಆಗಮಿಸುವ ರೋಗಿಗಳಿಗಾಗಿ ಕೆಲವೊಂದು ನಿಯಮಾವಳಿಗಳನ್ನು ರೂಪಿಸಲು ಮುಂದಾಗಿದೆ.
ನಿಯಮಾವಳಿಗಳು ವಿದೇಶಿ ರೋಗಿಗಳ ದಾಖಲೆಗಳ ಸಿದ್ಧತೆ, ಅವರ ಕುಟುಂಬಸ್ಥರೊಂದಿಗೆ ಮತ್ತು ಅವರ ದೇಶದ ರಾಯಭಾರ ಕಛೇರಿಯೊಂದಿಗೆ ಮಾಹಿತಿ ಹಂಚಿಕೊಳ್ಳುವಿಕೆ, ಡಿಸ್ಚಾರ್ಜ್, ಹೆಚ್ಚಿನ ಚಿಕಿತ್ಸೆಗಾಗಿ ಇನ್ನೊಂದು ದೇಶಕ್ಕೆ ರವಾನಿಸುವುದು ಮುಂತಾದುವುಗಳನ್ನು ಒಳಗೊಳ್ಳಲಿದೆ.
498 ಕೆಜಿ ತೂಕವಿದ್ದ ಎಸಾನ್ ಅವರನ್ನು ಮುಂಬಯಿ ಸೈಫೀ ಆಸ್ಪತ್ರೆಗೆ ಕರೆದುಕೊಂಡು ಚಿಕಿತ್ಸೆ ನೀಡಲಾಗಿತ್ತು. ಡಿಸ್ಚಾರ್ಜ್ ಆದ ದಿನದಂದು ಅವರ ತೂಕ 175 ಕೆಜಿ ಆಗಿತ್ತು. ಆದರೆ ಅವರ ಸಹೋದರಿ ಮತ್ತು ತಾಯಿ ಆಸ್ಪತ್ರೆಯ ವಿರುದ್ಧ ನಾನಾ ಆರೋಪಗಳನ್ನು ಹೊರಿಸಿದ್ದರು. ಇದರಿಂದ ಬಹಳಷ್ಟು ವಿವಾದಗಳು ಉದ್ಭವವಾಗಿದ್ದವು.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಹಾರಾಷ್ಟ್ರದ ಆರೋಗ್ಯ ಸಚಿವ ದೀಪಕ್ ಸಾವಂತ್, ಎಮನ್ ತೂಕ ಇಳಿಸಿಕೊಂಡ ರೀತಿ ನಮಗೆ ನಿಜಕ್ಕೂ ಹೆಮ್ಮೆ ತಂದಿದೆ. ಇದರಿಂದ ರಾಜ್ಯದ ಮೆಡಿಕಲ್ ಟೂರಿಸಂ ಕೂಡ ಪ್ರಗತಿಯಾಗಲು ಸಹಾಯಕವಾಗಿದೆ. ಆದರೆ ಈ ಪ್ರಕರಣದಿಂದ ನಾವು ಸಕಷ್ಟು ಕಲಿತುಕೊಂಡಿದ್ದೇವೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.