ಶ್ರೀನಗರ: ಜಮ್ಮು ಕಾಶ್ಮೀರದ ರಜೌರಿ ಜಿಲ್ಲೆಯ ಗಡಿ ರೇಖೆಯ ಸಮೀಪಗಡಿ ನುಸುಳಿ ಭಾರತದೊಳಕ್ಕೆ ಬರಲು ಯತ್ನಿಸಿದ 12 ವರ್ಷದ ಪಾಕಿಸ್ಥಾನ ಮೂಲದ ಬಾಲಕನೊಬ್ಬನನ್ನು ಸೇನೆ ಬಂಧನಕ್ಕೊಳಪಡಿಸಿದೆ.
ಒಳ ನುಸುಳುವಿಕೆಯ ದಾರಿಯನ್ನು ಪತ್ತೆ ಹಚ್ಚಲು ಮತ್ತು ಸೈನಿಕರ ನಿಯೋಜನೆಯ ಬಗ್ಗೆ ತಿಳಿದುಕೊಳ್ಳುವ ಸಲುವಾಗಿ ಪಾಕಿಸ್ಥಾನ ಸೇನೆಯು ಈತನನ್ನು ಗಡಿಯೊಳಕ್ಕೆ ಬಿಟ್ಟಿರಬಹುದು ಎಂಬ ಶಂಕೆಯನ್ನು ಸೇನೆ ವ್ಯಕ್ತಪಡಿಸಿದೆ.
ಶುಕ್ರವಾರ ಸಂಜೆ ರಜೌರಿಯ ನೌಶೆರಾ ಸೆಕ್ಟರ್ನಲ್ಲಿ ಒಳ ನುಸುಳುತ್ತಿದ್ದ ವೇಳೆ ಈತನ ಬಂಧನವಾಗಿದೆ.
ಬಾಲಕ ಪಾಕ್ ಸೇನೆಯ ನಿವೃತ್ತ ಸೈನಿಕನ ಮಗ ಅಶ್ಫಾಕ್ ಅಲಿ ಚೌವ್ಹಾಣ್ ಎಂಬುದಾಗಿ ತಿಳಿದು ಬಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.