ರಾಯ್ಪುರ: ಛತ್ತೀಸ್ಗಢದಲ್ಲಿ ಅಟ್ಟಹಾಸ ಮೆರೆಯುತ್ತಿರುವ ನಕ್ಸಲರಿಗೆ ತಕ್ಕ ಪ್ರತ್ಯುತ್ತರವನ್ನು ನೀಡುವ ಕಾರ್ಯವನ್ನು ಸೇನೆ ಮಾಡುತ್ತಿದೆ. ಸುಕ್ಮಾ ದಾಳಿಯ ಬಗ್ಗೆ ಕಾರ್ಯಾಚರಣೆ ಮಾಡಿದ ಸೇನೆ ಇಬ್ಬರು ನಕ್ಸಲ್ ಕಮಾಂಡರ್ಗಳನ್ನು ಗುಂಡಿಟ್ಟು ಹತ್ಯೆ ಮಾಡಿದೆ.
ಎಪ್ರಿಲ್ ೨೪ರ ಸುಕ್ಮಾ ದಾಳಿಯ ಬಳಿಕ 11 ಶಂಕಿತ ನಕ್ಸಲರನ್ನು ಸಿಆರ್ಪಿಎಫ್ ಮತ್ತು ರಾಜ್ಯ ಪೊಲೀಸ್ರು ವಿಚಾರಣೆ ನಡೆಸುತ್ತಿದ್ದಾರೆ. ಈ ಶಂಕಿತರು ಬರ್ಕಪಲ್ ದಾಳಿಯಲ್ಲಿ ಭಾಗವಹಿಸಿದ್ದಾರೆ ಎಂಬ ಗುಮಾನಿ ಇದೆ. ವಿಚಾರಣೆ ಪೂರ್ಣಗೊಂಡ ಬಳಿಕ ಇವರನ್ನು ನ್ಯಾಯಾಲಯದ ಕಸ್ಟಡಿಗೆ ಒಪ್ಪಿಸಲಾಗುತ್ತದೆ.
ಮೃತರಾದ ಇಬ್ಬರು ನಕ್ಸಲ್ ಕಮಾಂಡರ್ಗಳನ್ನು ರವಿ ಮತ್ತು ಅನಿಲ್ ಎಂದು ಹೇಳಲಾಗಿದೆ. ಸುಕ್ಮಾ ದಾಳಿಯ ಬಳಿಕೆ ನಡೆದ ಕಾರ್ಯಾಚರಣೆಯಲ್ಲಿ ಇವರು ಹತರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ಕಮಾಂಡರ್ಗಳು ಮಾತ್ರವಲ್ಲದೇ ಕಾರ್ಯಾಚರಣೆಯಲ್ಲಿ ಬಹಳಷ್ಟು ನಕ್ಸಲರು ಹತ್ಯೆಯಾಗಿರುವ ಸಾಧ್ಯತೆ ಇದೆ, ಆದರೆ ಇವರ ಮೃತದೇಹಗಳನ್ನು ಹೊತ್ತೊಯ್ಯುವಲ್ಲಿ ಇವರುಗಳು ಸಫಲರಾಗಿದ್ದಾರೆ ಎಂದು ಭದ್ರತಾ ಮೂಲಗಳು ತಿಳಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.