ಲಕ್ನೋ: ಹಣಕಾಸಿನ ತೊಂದರೆ ಮತ್ತು ಸರ್ಕಾರಗಳ ನಿರ್ಲಕ್ಷ್ಯದಿಂದ ನಿಂತು ಹೋಗಿದ್ದ ಅಯೋಧ್ಯಾದಲ್ಲಿನ ರಾಮಲೀಲಾ ಪದ್ಧತಿ ಇದೀಗ ಮತ್ತೆ ಆರಂಭಗೊಂಡಿದೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಆದೇಶದ ಮೇರೆಗೆ ಆಯೋಧ್ಯದಲ್ಲಿ ಬುಧವಾರ ರಾಮಲೀಲಾವನ್ನು ಆಯೋಜಿಸಲಾಗಿದೆ. ಆಯೋಧ್ಯಾ ಸಂಶೋಧನಾ ಕೇಂದ್ರದ ಆವರಣದಲ್ಲಿ ರಾಮಲೀಲಾವನ್ನು ನೆರವೇರಿಸಲಾಗಿತ್ತು.
ಮೇ3ರಿಂದ ಮೇ 12ರವರೆಗೆ ಮಹಂತಾ ಜಯರಾಮ್ ದಾಸ್ ಅವರ ಅವಧ್ ಆದರ್ಶ್ ರಾಮಲೀಲಾ ಮಂಡಳಿ ಹಾಗೂ ಮೇ 18ರಿಂದ ಜೂನ್ 1ರವರೆಗೆ ಡಾ.ಹರಿಹರ ಅವರ ಬಾಲಾಜಿ ರಾಮಲೀಲಾ ಮಂಡಳಿ ಪ್ರದರ್ಶನ ನೀಡಿದಲಿದೆ.
ಆಡಳಿತದಲ್ಲಿದ್ದ ಸರ್ಕಾರಗಳು ರಾಮಲೀಲಾ ನಡೆಸಲು ಉತ್ಸುಕತೆ ತೋರಿಸದ ಹಿನ್ನಲೆಯಲ್ಲಿ ರಾಮಲೀಲಾ ಪದ್ಧತಿ ಅಯೋಧ್ಯೆಯಲ್ಲಿ ಕಳೆದ ಹಲವಾರು ವರ್ಷಗಳಿಂದ ನಿಂತೇ ಹೋಗಿತ್ತು. ಇದೀಗ ಯೋಗಿ ಆದಿತ್ಯನಾಥ ಅವರು ಅದನ್ನು ಮತ್ತೆ ಆರಂಭಿಸಿ ಜನರ ಶ್ಲಾಘನೆಗೆ ಪಾತ್ರರಾಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.