ಚೆನ್ನೈ: ಅತ್ಯಂತ ರಸವತ್ತಾದ ಬಂಗನ್ಪಲ್ಲೆ ಮಾವಿಹಣ್ಣು ಇದೀಗ ಭೌಗೋಳಿಕ ಸೂಚನಾ ನೋಂದಾವಣಿಯನ್ನು ಪಡೆದುಕೊಂಡಿದೆ.
ಆಂಧ್ರಪ್ರದೇಶದ ತೋಟಗಾರಿಕ ಕಮಿಷನರ್ ಅವರ ಸಲ್ಲಿಸಿದ ಅರ್ಜಿಯನ್ನು ಪುರಸ್ಕರಿಸಿದ ಚೆನ್ನೈನಲ್ಲಿನ ಜಿಯೋಗ್ರಾಫಿಕಲ್ ಇಂಡಿಕೇಶನ್ ರಿಜಿಸ್ಟ್ರಿಯ ರಿಜಿಸ್ಟಾರ್ ಓ.ಪಿ ಗುಪ್ತಾ ಅವರು ಬಂಗನ್ಪಲ್ಲೆ ಮಾವಿನ ಹಣ್ಣಿಗೆ ಭೌಗೋಳಿಕ ಸೂಚನಾ ನೋಂದಾಣಿಯನ್ನು ನೀಡಿದ್ದಾರೆ.
ಈ ನೋಂದಣಿಯು ಈ ಮಾವಿನಹಣ್ಣು ಇಂತಹುದೇ ಪ್ರದೇಶದಿಂದ ಬಂದಿದೆ ಎಂಬುದನ್ನು ಸೂಚಿಸುತ್ತದೆ.
ಬಂಗನ್ಪಲ್ಲೆ ಮಾವಿನ ಹಣ್ಣು ತನ್ನ ಸಿಹಿಗೆ ಹೆಸರಾಗಿದ್ದು, 100 ವರ್ಷಗಳಿಂದ ಆಂಧ್ರದಲ್ಲಿ ಬೆಳೆಯಲ್ಪಡುತ್ತಿದೆ. ಬೆನೆಶನ್, ಬನೆಶನ್, ಬೆನಿಶನ್, ಚಪ್ಪತಾಯ್, ಸಫೆದ ಮುಂತಾದ ಹೆಸರುಗಳು ಈ ಮಾವಿನಹಣ್ಣಿಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.