ರಾಯ್ಪುರ: ಛತ್ತೀಸ್ಗಢದ ಸುಕ್ಮಾದಲ್ಲಿ ನಡೆದ ನಕ್ಸಲ್ ದಾಳಿಯಿಂದ ಹಲವಾರು ಮಂದಿಯ ಕುಟುಂಬಗಳು ಶೋಕಸಾಗರದಲ್ಲಿ ಮುಳುಗಿವೆ. ದೇಶಸೇವೆ ಮಾಡುತ್ತಾ ಕುಟುಂಬವನ್ನೂ ಪೊರೆಯುತ್ತಿದ್ದ 25 ಯೋಧರು ನಕ್ಸಲರ ಅಟ್ಟಹಾಸಕ್ಕೆ ಬಲಿಯಾಗಿ ಹೋಗಿದ್ದಾರೆ. ಇದೀಗ ಅವರ ಕುಟುಂಬಗಳು ಆಧಾರಸ್ತಂಭವನ್ನೇ ಕಳೆದುಕೊಂಡು ಅತಂತ್ರವಾಗಿದೆ.
ಈ ಯೋಧರ ಕುಟುಂಬಗಳಿಗೆ ನೆರವಿನ ಹಸ್ತ ನೀಡಲು ಛತ್ತೀಸ್ಗಢ ಸಿಎಂ ರಮಣ್ ಸಿಂಗ್ ಮುಂದಾಗಿದ್ದಾರೆ. ಮೃತ ಯೋಧ ಬನ್ಮಾಲಿ ಯಾದವ್ ಕುಟುಂಬಕ್ಕೆ ಸರ್ಪ್ರೈಸ್ ಭೇಟಿ ನೀಡಿದ ಅವರು, ಆ ಯೋಧನ ಪತ್ನಿಯನ್ನು ಪೊಲೀಸ್ ಇಲಾಖೆಯಲ್ಲಿ ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್ ಆಗಿ ನೇಮಿಸಿರುವ ಬಗ್ಗೆ ಲೆಟರ್ವೊಂದನ್ನು ಖುದ್ದಾಗಿ ಹಸ್ತಾಂತರ ಮಾಡಿದರು.
28 ಲಕ್ಷ ರೂಪಾಯಿಗಳ ಚೆಕ್ನ್ನು ಆ ಕುಟುಂಬಕ್ಕೆ ಅವರು ನೀಡಿದ್ದು ಮಾತ್ರವಲ್ಲದೇ ಜಶ್ಪುರ್ನಲ್ಲಿ ಮನೆಯೊಂದನ್ನು ನೀಡುವುದಾಗಿ ಭರವಸೆ ನೀಡಿದರು. ಅಲ್ಲದೇ ಅವರ ಮಗಳ ಹೆಸರಲ್ಲಿ 3.5 ಲಕ್ಷ ಬ್ಯಾಂಕ್ ಠೇವಣಿ ಇಡುವುದಾಗಿ ಘೋಷಿಸಿದರು.
ಪ್ರಸ್ತುತ ಲೋಕ ಸೂರ ಅಭಿಯಾನ ನಡೆಸುತ್ತಿರುವ ರಮಣ್ ಸಿಂಗ್ ಇದರ ಭಾಗವಾಗಿ ಬುಡಕಟ್ಟು ಗ್ರಾಮಗಳಿಗೆ ಪ್ರವಾಸ ಹಮ್ಮಿಕೊಂಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.