ಬುಂದೇಲ್ಖಂಡ್: ಬರಪೀಡಿತ ಬುಂದೇಲ್ಖಂಡ್ನಲ್ಲಿ ನೋಡಿಕೊಳ್ಳುವವರಿಲ್ಲದೆ, ಅನಾಥವಾಗಿರುವ ಗೋವುಗಳ ರಕ್ಷಣೆಗೆ ಮುಂದಾಗಿದ್ದಾರೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ.
ಬುಂದೇಲ್ಖಂಡ್ ಬರದಿಂದ ತತ್ತರಿಸಿ ಹೋಗಿದ್ದು, ಅಲ್ಲಿನ ಜಾನುವಾರು ನೀರು ಮತ್ತು ಹುಲ್ಲುಗಳು ಸಿಗದೆ ಸಾಯುತ್ತಿವೆ. ಅದರಲ್ಲೂ ನೋಡಿಕೊಳ್ಳುವವರಿಲ್ಲದೆ ಇರುವ ಗೋವುಗಳ ಪರಿಸ್ಥಿತಿ ತೀವ್ರ ಹದಗೆಟ್ಟಿದೆ. ಹೀಗಾಗೀ ಇಂತಹ ಗೋವುಗಳಿಗೆ ಆಶ್ರಯ ನೀಡುವ ಸಲುವಾಗಿ ಹುಲ್ಲುಗಾವಲನ್ನು ನಿರ್ಮಿಸಲು ಆದಿತ್ಯನಾಥ ಅವರು ಚಿಂತನೆ ನಡೆಸಿದ್ದಾರೆ.
ಇತ್ತೀಚಿಗೆ ಬುಂದೇಲ್ಖಂಡ್ಗೆ ತೆರಳಿದ್ದ ಸಂದರ್ಭ ಅಲ್ಲಿನ ಜನರು ಗೋವುಗಳ ಪರಿಸ್ಥಿತಿಯ ಬಗ್ಗೆ ಅವರ ಗಮನಕ್ಕೆ ತಂದರು. ಅಲ್ಲದೇ ಕೆಲವರು ಹುಲ್ಲುಗಾವಲು ಪ್ರದೇಶವನ್ನು ಅಕ್ರಮವಾಗಿ ವಶಕ್ಕೆ ತೆಗೆದುಕೊಂಡಿದ್ದಾರೆ ಎಂಬ ಬಗ್ಗೆಯೂ ಅವರು ತಿಳಿದುಕೊಂಡರು. ಹೀಗಾಗಿ ಕಾರ್ಯಪ್ರವೃತ್ತರಾಗಿರುವ ಯೋಗಿ ಹುಲ್ಲುಗಾವಲುಗಳನ್ನು ವಾಪಾಸ್ ಪಡೆದು ಅಲ್ಲಿ ಗೋವುಗಳಿಗೆ ಬೇಕಾದ ಸೌಲರ್ಭಯ ಕಲ್ಪಿಸಿ ಅವುಗಳಿಗೆ ಆಶ್ರಯ ನೀಡಲು ಮುಂದಾಗಿದ್ದಾರೆ.
ಅಷ್ಟೇ ಅಲ್ಲದೇ ಗೋವುಗಳಿಗಾಗಿ ರಸ್ತೆ ಬದಿಗಳಲ್ಲಿ ನೀರಿನ ತೊಟ್ಟಿಗಳನ್ನು ನಿರ್ಮಿಸುವಂತೆ ಅವರು ಸೂಚಿಸಿದ್ದಾರೆ. ಗೋವುಗಳ ಆರೋಗ್ಯ ತಪಾಸಿಸುವಂತೆ ವೈದ್ಯರಿಗೂ ಸೂಚಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.