ಜೈಪುರ: ಉತ್ತರಪ್ರದೇಶದ ಬಳಿಕ ಇದೀಗ ರಾಜಸ್ಥಾನದಲ್ಲಿ ದೌರ್ಜನ್ಯ, ಮಹಿಳೆಯರಿಗೆ ಕಿರುಕುಳ ನೀಡುವುದು ಮತ್ತು ಉಪಟಳಗಳನ್ನು ತಡೆಯುವ ಸಲುವಾಗಿ ಸಂಚಾರಿ ಗಸ್ತು ತಂಡ(Mobile patrol units)) ಗಳನ್ನು ರಚಿಸಲಾಗಿದೆ.
ಈಗಾಗಲೇ 26 ಮಹಿಳಾ ಗಸ್ತು ಘಟಕಗಳನ್ನು ರಚಿಸಲಾಗಿದ್ದು, ಪ್ರತಿ ಘಟಕದಲ್ಲಿ ಇಬ್ಬರು ಮಹಿಳಾ ಕಾನ್ಸ್ಸ್ಟೇಬಲ್ಗಳಿರಲಿದ್ದಾರೆ. ಸೋಮವಾರ ಜೈಪುರದ ಕಮಿಷನರ್ ಕಛೇರಿಯಲ್ಲಿ ಇವುಗಳಿಗೆ ಚಾಲನೆ ನೀಡಲಾಗಿದೆ. ಅತೀ ಸೂಕ್ಷ್ಮ ಪ್ರದೇಶಗಳಲ್ಲಿ ಇವರು ನಿಯೋಜನೆಗೊಂಡಿದ್ದಾರೆ.
’26 ತಂಡಗಳಲ್ಲಿ ಒಟ್ಟು 52 ಯುವತಿಯರಿದ್ದಾರೆ. ಬೆಳಿಗ್ಗೆ ಮತ್ತು ಸಂಜೆ ಸಮಯದಲ್ಲಿ ಕಾರ್ಯಾಚರಿಸಲಿದ್ದಾರೆ. ಹೆಚ್ಚು ದೂರುಗಳ ಬರುವ ಸ್ಥಳಗಳಿಗೆ ಮತ್ತು ಜನನಿಬಿಡ ಸ್ಥಳಗಳಲ್ಲಿ ಇವರು ನಿಯೋಜನೆಗೊಂಡಿದ್ದಾರೆ. ಇವರಿಗೆ ವೈಯರ್ಲೆಸ್ ನೀಡಲಾಗಿದ್ದು, ಪಿಸಿಆರ್ ವ್ಯಾನ್ನೊಂದಿಗೆ ಸದಾ ಸಂಪರ್ಕದಲ್ಲಿರುತ್ತಾರೆ. ತಪ್ಪು ಕಂಡುಬಂದಾಗ ಇವರು ಮಾಹಿತಿ ನೀಡಿದ ತಕ್ಷಣ ಪಿಸಿಆರ್ ವ್ಯಾನ್ ಆ ಜಾಗಕ್ಕೆ ತಲುಪಿ ಕಾನೂನಿನಂತೆ ಕ್ರಮಕೈಗೊಳ್ಳಲಿದೆ. ಹೆಚ್ಚುವರಿ ಡಿಸಿಪಿ ಈ ತಂಡದ ಸಂಪೂರ್ಣ ಉಸ್ತುವಾರಿಯನ್ನು ಹೊತ್ತಿದ್ದಾರೆ’ ಎಂದು ಜೈಪುರ ಪೊಲೀಸ್ ಕಮಿಷನರ್ ಸಂಜಯ್ ಅಗರ್ವಾಲ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.