ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಗುರುವಾರ ಶಿಮ್ಲಾದಲ್ಲಿ ‘UDAN’ (ಉಡ್ ದೇಶ್ ಕಾ ಆಮ್ ನಾಗರಿಕ್) ವಿಮಾನ ಯೋಜನೆಗೆ ಚಾಲನೆ ನೀಡಿದರು. ಅತೀ ಕಡಿಮೆ ದರದಲ್ಲಿ ಪ್ರಾದೇಶಿಕ ಮಟ್ಟದಲ್ಲಿ ಈ ಯೋಜನೆಯಡಿ ವಿಮಾನಗಳು ಹಾರಾಟ ನಡೆಸಲಿದೆ.
ಉಡಾನ್ ಕೇಂದ್ರದ ಪ್ರಾದೇಶಿಕ ಸಂಪರ್ಕ ಯೋಜನೆಯಾಗಿದ್ದು, ಇದರ ಮೊದಲ ಹಂತದ ವಿಮಾನ ಶಿಮ್ಲಾ-ನವದೆಹಲಿ, ಕಡಪ-ಹೈದರಾಬಾದ್, ನಂದೆದ್-ಹೈದರಾಬಾದ್ ನಡುವೆ ಹಾರಾಟ ನಡೆಸಲಿದೆ.
ಶಿಮ್ಲಾ ಮತ್ತು ನವದೆಹಲಿ ನಡುವಣ ವಿಮಾನ ಹಾರಾಟಕ್ಕೆ ಮೋದಿ ಶಿಮ್ಲಾದಲ್ಲಿ ಚಾಲನೆ ನೀಡಿದ್ದಾರೆ. ಕೇವಲ 2,500 ರೂಪಾಯಿ ದರದಲ್ಲಿ ಶಿಮ್ಲಾದಿಂದ ನವದೆಹಲಿಗೆ ಜನಸಾಮಾನ್ಯರು ಪ್ರಯಾಣಿಸಬಹುದಾಗಿದೆ.
ಹಿಮಾಚಲಪ್ರದೇಶ ಗವರ್ನರ್ ಆಚಾರ್ಯ ದೇವವ್ರತ್. ಸಿಎಂ ವೀರಭದ್ರ ಸಿಂಗ್, ಕೇಂದ್ರ ಸಚಿವ ಅಶೋಕ್ ಗಜಪತಿ ರಾಜು, ಜಯಂತ್ ಸಿನ್ಹಾ, ಜೆ.ಪಿ ನಡ್ಡಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಇದೇ ವೇಳೆ ಅವರು ಕಡಪ-ಹೈದರಾಬಾದ್ ಮತ್ತು ನಂದೆದ್-ಹೈದರಾಬಾದ್ ಸೆಕ್ಟರ್ ನಡುವಣ ಉಡಾನ್ ವಿಮಾನವನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದರು.
ದೇಶದ ಬಡವನೂ ವಿಮಾನದಲ್ಲಿ ಪ್ರಯಾಣಿಸುವುದನ್ನು ನೋಡಬಯಸುತ್ತೇನೆ, ಮಧ್ಯಮವರ್ಗದವರೂ ವಿಮಾನದಲ್ಲಿ ಪ್ರಯಾಣಿಸುವಂತಾದರೆ ದೇಶದ ಇಮೇಜ್ ಮತ್ತು ಗುರಿಯೂ ಬದಲಾಗುತ್ತದೆ. ಬಡವರ ಬದುಕು ಪರಿವರ್ತನೆಯಾಗುತ್ತದೆ’ ಎಂದು ಮೋದಿ ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.