ಬೆಂಗಳೂರು: ಬಸವ ಜಯಂತಿ, ಮೇ.1ರ ರಜೆಗಳು ಇರುವ ಹಿನ್ನಲೆಯಲ್ಲಿ ಎ.28ರಿಂದ 30ರವರೆಗೆ ಹೆಚ್ಚುವರಿಯಾಗಿ 450-500 ಬಸ್ಗಳನ್ನು ಓಡಿಸಲು ಕೆಎಸ್ಆರ್ಟಿಸಿ ನಿರ್ಧರಿಸಿದೆ. ರಜೆಗಳಲ್ಲಿ ಬೆಂಗಳೂರಿನಿಂದ ವಿವಿಧ ಊರುಗಳಿಗೆ ತೆರಳುವ ಪ್ರಯಾಣಿಕರಿಗೆ ಸಹಾಯವಾಗಲೆಂದು ಈ ವ್ಯವಸ್ಥೆ ಮಾಡಲಾಗುತ್ತಿದೆ.
ಬೆಂಗಳೂರು ಕೆಂಪೇಗೌಡ ಬಸ್ ನಿಲ್ದಾಣದಿಂದ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಮಂಗಳೂರು, ಹಾಸನ, ಶಿವಮೊಗ್ಗ, ಶೃಂಗೇರಿ, ದಾವಣಗೆರೆ, ಗೋಕರ್ಣ, ಶಿರಸಿ, ಬಳ್ಳಾರಿ, ಕೊಪ್ಪಳ ಮುಂತಾದ ಕಡೆ ಹೆಚ್ಚುವರಿ ಬಸ್ಗಳು ಪ್ರಯಾಣಿಸಲಿವೆ.
ಈ ವಿಶೇಷ ಬಸ್ಗಳಿಗೆ ಕಂಪ್ಯೂಟರೀಕೃತ ಮೀಸಲ್ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆಯನ್ನೂ ಮಾಡಲಾಗಿದೆ. ಇವುಗಳ ದರವನ್ನು ಶೇ.೫ರಷ್ಟು ಏರಿಕೆ ಮಾಡಲಾಗಿದೆ.
ಮೇ.1ರಂದು ವಿವಿಧ ಊರುಗಳಿಂದ ಬೆಂಗಳೂರಿಗೆ ಹೆಚ್ಚುವರಿಯಾಗಿ ಬಸ್ಗಳನ್ನು ಓಡಿಸಲಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.