ನವದೆಹಲಿ: ನಕ್ಸಲರ ವಿರುದ್ಧ ಆಕ್ರಮಣಕಾರಿ ದಾಳಿ ನಡೆಸಿ, ಕೆಲವೇ ವಾರದಲ್ಲಿ ಇದರ ಫಲಿತಾಂಶವನ್ನು ತೋರಿಸಿ ಎಂದು ಭದ್ರತಾ ಪಡೆಗಳಿಗೆ ಕೇಂದ್ರ ಸೂಚನೆ ನೀಡಿದೆ.
‘ಸಿಆರ್ಪಿಎಫ್ ಯೋಧರ ಮೇಲೆ ಪದೇ ಪದೇ ದಾಳಿ ನಡೆಯುತ್ತಿರುವುದಕ್ಕೆ ಕಾರಣವಾದ ವೈಫಲ್ಯಗಳನ್ನು ಮತ್ತು ಏರಿಯಾಗಳ ಸಮಸ್ಯೆಯನ್ನು ಗುರುತಿಸಿ, ನಕ್ಸಲ್ ವಿರುದ್ಧ ಕಾರ್ಯಾಚರಣೆಯ ತಂತ್ರಗಾರಿಕೆ ರೂಪಿಸಿ. ಮುಂದಿನ ಕೆಲವೇ ವಾರದಲ್ಲಿ ನಮಗೆ ಫಲಿತಾಂಶವನ್ನು ತೋರಿಸಿ’ ಎಂದು ಗೃಹಸಸಚಿವ ರಾಜನಾಥ್ ಸಿಂಗ್ ಅವರು ಭದ್ರತಾಪಡೆಗಳಿಗೆ ಸೂಚಿಸಿದ್ದಾರೆ.
ಸುಕ್ಮಾದಲ್ಲಿ ನಕ್ಸಲರು 25ಯೋಧರನ್ನು ಕೊಂದು ಹಾಕಿರುವುದನ್ನು ’ಕೋಲ್ಡ್ ಬ್ಲಡ್ಡೆಡ್ ಮರ್ಡರ್’ ಎಂದು ಬಣ್ಣಿಸಿರುವ ಅವರು, ಮೇ 8ರಂದು 10 ನಕ್ಸಲ್ ಪೀಡಿತ ರಾಜ್ಯಗಳ ಉನ್ನತ ಮಟ್ಟದ ಸಭೆ ಕರೆದಿದ್ದಾರೆ.
‘ಹೆಚ್ಚಿನ ಸಿಬ್ಬಂದಿ, ತಾಂತ್ರಿಕ ಸಹಾಯ, ಉತ್ತಮ ಸಂಪನ್ಮೂಲ ಏನು ಬೇಕೋ ಅದನ್ನು ಕೇಳಿ ನಾನು ನಿಮಗೆ ವ್ಯವಸ್ಥೆ ಮಾಡುತ್ತೇನೆ. ಆದರೆ ನನಗೆ ಉತ್ತಮ ಫಲಿತಾಂಶ ಬೇಕು ಅಷ್ಟೇ’ ಎಂದು ರಾಜನಾಥ್ ಹೇಳಿದ್ದಾರೆ ಎನ್ನಲಾಗಿದೆ.
ಪರಸ್ಪರ ಟೀಕೆ ಮಾಡುವುದನ್ನು ನಿಲ್ಲಿಸಲು ಮತ್ತು ಸಿಆರ್ಪಿಎಫ್ ಅವಶ್ಯಕತೆಗಳನ್ನು ಪೂರೈಸಲು ಇದು ರಾಜಕಾರಣಿಗಳಿಗೆ ಸುಸಂದರ್ಭ ಎಂದು ಅವರು ಅಭಿಪ್ರಾಯಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.