ನವದೆಹಲಿ: ದೇಶದ ಖ್ಯಾತ ಉದ್ಯಮಿ, ಕೋಟ್ಯಾಧಿಪತಿಯಾಗಿರುವ ರತನ್ ಟಾಟಾ ಅವರಿಗೆ ರೈಲಿನಲ್ಲಿ ಪ್ರಯಾಣಿಸುವ ಅಸೆಯಾಗಿದೆಯಂತೆ, ಈ ವಿಷಯವನ್ನು ಸ್ವತಃ ಅವರೇ ಹೇಳಿಕೊಂಡಿದ್ದಾರೆ.
ರೈಲ್ವೇ ಸಚಿವಾಲಯದ ಕಾಯಕಲ್ಪ್ ಕೌನ್ಸಿಲ್ನ ಸಭೆಯಲ್ಲಿ ಭಾಗವಹಿಸಿದ ಅವರು ತಮ್ಮ ಇಂಗಿತವನ್ನು ತೋಡಿಕೊಂಡಿದ್ದಾರೆ. ಉನ್ನತ ಉದ್ಯಮಿಯಾಗಿರುವ ಇವರು ಕಳೆದ 50 ವರ್ಷಗಳಿಂದ ರೈಲಿನಲ್ಲಿ ಪ್ರಯಾಣಿಸಿಯೇ ಇಲ್ಲವಂತೆ.
ಇವರು ರೈಲಿನಲ್ಲಿ ಪ್ರಯಾಣಿಸದೇ ಇದ್ದರೂ ರೈಲ್ವೇಯ ಕಾಯಕಲ್ಪ ಕೌನ್ಸಿಲ್ಗೆ ಸರ್ಕಾರ ಇವರನ್ನು ಆಯ್ಕೆ ಮಾಡಿದೆ. ಈ ಬಗ್ಗೆ ಸ್ವತಃ ಟಾಟಾ ಅವರೇ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಇದೀಗ ನನ್ನ ಪ್ರಾಜೆಕ್ಟ್ಗಾಗಿಯಾದರೂ ನಾನು ರೈಲಿನಲ್ಲಿ ಪ್ರಯಾಣಿಸಬೇಕಿದೆ. ರೈಲ್ವೇ ಸಚಿವ ಸುರೇಶ್ ಪ್ರಭು ಕೂಡ ನನಗೆ ಈ ಸಲಹೆ ನೀಡಿದ್ದಾರೆ ಎಂದು ಅವರು ಹೇಳಿಕೊಂಡಿದ್ದಾರೆ.
ಕೌನ್ಸಿಲ್ನಲ್ಲಿರುವ ತಮ್ಮ ತಂಡದ ಇತರ ಸದಸ್ಯರೊಂದಿಗೆ ಟಾಟಾ ಅವರು ರೈಲಿನಲ್ಲಿ ಪ್ರಯಾಣಿಸಲಿದ್ದಾರೆ, ಅವರ ಪ್ರಯಾಣಕ್ಕೆ ಸಿದ್ಧತೆ ಮಾಡುವುದಾಗಿ ರೈಲ್ವೇ ಅಧಿಕಾರಿಗಳು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.