ಕೋಲ್ಕತ್ತಾ: ಕೇಂದ್ರ ಸರ್ಕಾರದ ಸ್ವಚ್ಛ ಭಾರತ ಅಭಿಯಾನವನ್ನು ಪಶ್ಚಿಮ ಬಂಗಾಲದಲ್ಲಿ ‘ಮಿಷನ್ ನಿರ್ಮಲ್ ಬಾಂಗ್ಲಾ’ ಎಂದು ಬದಲಾಯಿಸಿರುವುದು ದೀದಿ ವರ್ಸಸ್ ಮೋದಿ ಎಂಬ ಮಾತಿಗೆ ಮತ್ತಷ್ಟು ಪುಷ್ಟಿ ನೀಡಿದಂತಾಗಿದೆ.
ರಾಜ್ಯ ಸರ್ಕಾರದ ಸಹಭಾಗಿತ್ವ ಇರುವ ಕೇಂದ್ರ ಸರ್ಕಾರದ ಯೋಜನೆಗಳ ಹೆಸರುಗಳನ್ನೆಲ್ಲ ಮಮತಾ ಸರ್ಕಾರ ಬದಲಾಯಿಸಿದೆ. ಈ ಕುರಿತು ಪಂಚಾಯತ್ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ ಸುತ್ತೋಲೆಯನ್ನೂ ಹೊರಡಿಸಿದೆ.
ಅಜೀವಿಕಾ (National Rural Livelihood Mission) ಈಗ ಆನಂದ ಧಾರಾ (State Rural Livelihood Mission) ಆಗಿದೆ. ಪ್ರಧಾನ ಮಂತ್ರಿ ಗ್ರಾಮ್ ಸಡಕ್ ಯೋಜನಾ ಬಂಗ್ಲಾರ್ ಗ್ರಾಮೀಣ್ ಸಡಕ್ ಯೋಜನಾ ಆಗಿದೆ. ಪ್ರಧಾನ್ ಮಂತ್ರಿ ಆವಾಸ್ ಯೋಜನಾ ಬಂಗ್ಲಾರ್ ಗೃಹ್ ಪ್ರಕಲ್ಪ ಯೋಜನೆಯಾಗಿ ಬದಲಾಗಿದ್ದು ಗಮನಾರ್ಹ.
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೇ ಮುತುವರ್ಜಿ ಈ ಬದಲಾವಣೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿದ್ದು, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸೌರಭ್ ಕುಮಾರ್, ರಾಜ್ಯ ಸರ್ಕಾರ ಇಟ್ಟಿರುವ ಈ ಹೆಸರುಗಳನ್ನೇ ಬಳಸಬೇಕು ಎಂದು ಆದೇಶಿಸಿದ್ದಾರೆ.
ಕೇಂದ್ರ ಸರ್ಕಾರದ ಯೋಜನೆಗಳಲ್ಲಿ ರಾಜ್ಯ ಸರ್ಕಾರದ ಪಾಲು ಗಣನೀಯವಾಗಿದೆ. ಈ ಹಿಂದೆ ಶೇ.10ರಷ್ಟಿದ್ದರೆ ಈಗ ಅದು ಶೇ.40 ಇದೆ. ಆದ್ದರಿಂದ ಯೋಜನೆ ಹಿರಿಮೆಯನ್ನು ಕೇಂದ್ರಕ್ಕೇಕೆ ಕೊಡಬೇಕು ಎಂಬುದು ದೀದಿಯ ವಾದವಂತೆ.
ಈ ಕುರಿತು ಬಿಜೆಪಿ ಕಾರ್ಯದರ್ಶಿ ಸಯಾಂತನ್ ಬಸು, ಕೇಂದ್ರದ ಯೋಜನೆಗಳ ಹೆಸರು ಬದಲಾಯಿಸಿ ಮಮತಾ ಅವರು ರಾಜಕೀಯ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.