ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಬಾಲ್ಯದಲ್ಲಿ ಚಹಾ ಮಾಡುತ್ತಿದ್ದ ಗುಜರಾತಿನ ವಡ್ನಗರ್ ರೈಲ್ವೇ ಸ್ಟೇಶನ್ ಶೀಘ್ರದಲ್ಲೇ 8 ಕೋಟಿ ರೂಪಾಯಿ ವೆಚ್ಚದಲ್ಲಿ ಮೇಕ್ ಓವರ್ ಆಗಲಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರೈಲ್ವೇ ಖಾತೆಯ ರಾಜ್ಯ ಸಚಿವರು, ಮೆಹ್ಸಾನ್ ಜಿಲ್ಲೆಯ ವಡ್ನಗರ್ ರೈಲ್ವೇ ಸ್ಟೇಶನ್ನಿನ ಅಭಿವೃದ್ಧಿಗೆ 8 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ ಎಂದಿದ್ದಾರೆ.
ವಡ್ನಗರ್, ಮೊಧೆರ, ಪಾಟನ್ ಟೂರಿಸಂ ಡೆಸ್ಟಿನೇಷನ್ಗಳ ಅಭಿವೃದ್ಧಿಗೆ 100 ಕೋಟಿ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಈ ಯೋಜನೆ ವಡ್ನಗರ್ ರೈಲ್ವೇ ಸ್ಟೇಶನ್ ಅಭಿವೃದ್ಧಿಯನ್ನೂ ಒಳಗೊಂಡಿದೆ.
ಈಗಾಗಲೇ ರೈಲ್ವೇಯು ವಡ್ನಗರ್-ಮೆಹ್ಸಾನರಸ್ತೆಯ ಮೀಟರ್ ಗೇಜ್ ಲೈನ್ನನ್ನು ಬ್ರಾಡ್ ಗೇಜ್ ಲೈನ್ ಆಗಿ ಪರಿವರ್ತಿಸಲಾಗುತ್ತಿದೆ.
ವಡ್ನಗರ್ ರೈಲ್ವೇ ಸ್ಟೇಶನ್ನಿನಲ್ಲಿ ಪ್ರಧಾನಿ ತಮ್ಮ ಬಾಲ್ಯದಲ್ಲಿ ತಂದೆಯೊಂದಿಗೆ ಚಹಾ ಮಾರಾಟ ಮಾಡುತ್ತಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.