ನವದೆಹಲಿ : ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಜೋಂಟಿ ರೋಡ್ಸ್ ಅವರು ತಮ್ಮ ಮಗಳು ಇಂಡಿಯಾಳ ಎರಡನೇ ವರ್ಷದ ಹುಟ್ಟುಹಬ್ಬವನ್ನು ಭಾನುವಾರ ಆಚರಿಸಿದರು.
ಈ ವೇಳೆ ಜೋಂಟಿ ರೋಡ್ಸ್ ಅವರು ತನ್ನ ಮಗಳ ಫೋಟೋವನ್ನು ಟ್ವಿಟರ್ಗೆ ಹಾಕಿದ್ದು, ಆಕೆಗೆ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ.
ವಿಶೇಷವಾಗಿ ಭಾರತದ 128 ಕೋಟಿ ಜನತೆ ಇಂಡಿಯಾಳಿಗೆ ಶುಭಾಶಯವನ್ನು ಕೋರಿದ್ದಾರೆ.
ಅದೂ ಪ್ರಧಾನಿ ನರೇಂದ್ರ ಮೋದಿ ಅವರ ಮೂಲಕ.
ಟ್ವಿಟರ್ ಮೂಲಕ ಇಂಡಿಯಾಳ ಜನ್ಮ ದಿನಕ್ಕೆ ಶುಭಾಶಯ ಕೋರಿದ್ದ ಮೋದಿ, ಇಂಡಿಯಾಳ ಜನ್ಮದಿನಕ್ಕೆ ಇಂಡಿಯಾದ ಶುಭಾಶಯಗಳು ಎಂದಿದ್ದರು.
Happy birthday to India, from India. 🙂 https://t.co/DbOZFEKLe9
— Narendra Modi (@narendramodi) April 23, 2017
ಕೇವಲ 12 ಗಂಟೆಗಳಲ್ಲಿ 6,300 ಬಾರಿ ಈ ಟ್ವೀಟ್ ರೀಟ್ವೀಟ್ ಆಗಿದೆ.
2015 ರಲ್ಲಿ ಇಂಡಿಯಾ ಜೋಂಟಿ ಮುಂಬೈನಲ್ಲಿ ಜನಿಸಿದಳು. ಈ ವೇಳೆ ಕ್ರಿಕೆಟಿಗ ಜೋಂಟಿ ರೋಡ್ಸ್ ಅವರು ಐಪಿಎಲ್ ತಂಡ ಮುಂಬೈ ಇಂಡಿಯಾದ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.
ಭಾರತದ ಸಂಸ್ಕೃತಿ ಮತ್ತು ಇಲ್ಲಿನ ಜನತೆಯ ಬಗ್ಗೆ ಅಪಾರ ಗೌರವವನ್ನು ಅವರು ಹೊಂದಿರುವ ಕಾರಣ ತಮ್ಮ ಮಗಳಿಗೆ ‘ಇಂಡಿಯಾ’ ಎಂದೇ ಹೆಸರಿಟ್ಟಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.