ನವದೆಹಲಿ : ತನ್ನ ಇಂದಿನ ಡೂಡಲ್ನ್ನು ಗೂಗಲ್ ಕನ್ನಡದ ಮೇರು ನಟ ಡಾ. ರಾಜ್ಕುಮಾರ್ ಅವರಿಗೆ ಅರ್ಪಿಸಿದೆ.
1929 ರ ಏಪ್ರಿಲ್ 24 ರಂದು ಜನಿಸಿದ ರಾಜ್ಕುಮಾರ್ ಕನ್ನಡದ ಅತಿ ಶ್ರೇಷ್ಠ ನಟ ಸಾರ್ವಭೌಮ. ಇವರನ್ನು ಪ್ರೀತಿಯಿಂದ ಜನ ‘ಅಪ್ಪಾಜಿ, ಅಣ್ಣಾವ್ರು’ ಎಂದೇ ಸಂಬೋಧಿಸುತ್ತಾರೆ.
ಇಂದು ರಾಜ್ಕುಮಾರ್ ಅವರ 88 ನೇ ಜನ್ಮದಿನವನ್ನು ಆಚರಿಸಲಾಗುತ್ತಿದೆ.
ಯುವ ರಾಜ್ಕುಮಾರ್ ಅವರನ್ನು ಮೂವಿ ಥಿಯೇಟರ್ನಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳು ವೀಕ್ಷಿಸುತ್ತಿರುವಂತೆ ಡೂಡಲ್ನ್ನು ವಿನ್ಯಾಸಗೊಳಿಸಲಾಗಿದೆ. ಈ ಮೂಲಕ ಕನ್ನಡದ ಮೇರು ನಟನಿಗೆ ಗೂಗಲ್ ಡೂಡಲ್ ಗೌರವ ಸಲ್ಲಿಸಿದೆ.
ಈ ಡೂಡಲ್ ಅನ್ನು ಕ್ಲಿಕ್ ಮಾಡಿದರೆ ಡಾ. ರಾಜ್ಕುಮಾರ್ ಅವರ ಕುರಿತ ವಿಕಿಪೀಡಿಯಾ ಸೇರಿದಂತೆ ಅವರ ಬಗೆಗಿನ ಹಲವಾರು ಇತರ ಲಿಂಕ್ಗಳು ನೋಡಲು ಸಿಗುತ್ತದೆ.
ಏಪ್ರಿಲ್ 12, 2006 ರಲ್ಲಿ ತಮ್ಮ 77 ನೇ ವಯಸ್ಸಿನಲ್ಲಿ ಇವರು ದೈವಾಧೀನರಾದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.