ನವದೆಹಲಿ: ಶಾಲೆಗಳು ಸೇವಾ ಕೇಂದ್ರಗಳೇ ಹೊರತು ವ್ಯವಹಾರ ಕೇಂದ್ರಗಳಲ್ಲ ಎಂದಿರುವ ಸಿಬಿಎಸ್ಸಿ, ಸಮವಸ್ತ್ರ, ಸ್ಟೇಷನರಿಗಳನ್ನು ಮಾರಾಟ ಮಾಡದಂತೆ ಶಾಲೆಗಳಿಗೆ ತಾಕೀತು ಮಾಡಿದೆ.
ಶಾಲೆಗಳು ಬ್ಯಾಗ್, ಪುಸ್ತಕ, ಸಮವಸ್ತ್ರಗಳನ್ನು ಮಾರಾಟ ಮಾಡುವ ಮೂಲಕ ವಾಣಿಜ್ಯ ವ್ಯವಹಾರದಲ್ಲಿ ತೊಡಗಿವೆ ಎಂದು ಪೋಷಕರು, ವ್ಯಾಪಾರಿಗಳು ದೂರಿ ನೀಡಿರುವ ಹಿನ್ನಲೆಯಲ್ಲಿ ಸಿಬಿಎಸ್ಸಿ ನಿಯಮಾವಳಿಗಳನ್ನು ಜಾರಿಗೊಳಿಸಿದೆ.
ಶಾಲಾ ಆವರಣದಲ್ಲಿ ವಿದ್ಯಾರ್ಥಿಗಳಿಗೆ ಬೇಕಾಗುವ ಪರಿಕರಗಳನ್ನು ಮಾರಾಟ ಮಾಡುವುದು ಅಥವಾ ಇಂತಹುದೇ ವ್ಯಾಪಾರಿಗಳಿಂದ ಖರೀದಿ ಮಾಡಬೇಕು ಎಂದು ಪೋಷಕರಿಗೆ ಒತ್ತಡ ಹೇರುವುದು ಅನಾರೋಗ್ಯಕರ ಬೆಳವಣಿಗೆಯಾಗಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿದ್ದೇವೆ ಎಂದು ಸಿಬಿಎಸ್ಸಿ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.