ನವದೆಹಲಿ: ಕಳೆದ ಎರಡು ವರ್ಷಗಳಿಂದ ಎನ್ಡಿಎ ಸರ್ಕಾರ 2,008 ನಗರಗಳಲ್ಲಿ 17.73 ಲಕ್ಷ ಕೈಗೆಟಕುವ ದರಗಳ ವಸತಿಗಳ ನಿರ್ಮಾಣಕ್ಕೆ ಸಮ್ಮತಿ ನೀಡಿದೆ. ಯುಪಿಎ ಸರ್ಕಾರ 10 ವರ್ಷಗಳ ಅವಧಿಯಲ್ಲಿ 1,061 ನಗರಗಳಲ್ಲಿ ಕೇವಲ 18.82 ಲಕ್ಷ ವಸತಿಗಳ ನಿರ್ಮಾಣ ಮಾಡಿತ್ತು ಎಂದು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಹೇಳಿದ್ದಾರೆ.
ಕೇಂದ್ರ ಏನು ಮಾಡಬಹುದೋ ಅದನ್ನು ಮಾಡಿದೆ, ಇದೀಗ 2022ರೊಳಗೆ ಎಲ್ಲಾ ಬಡವರಿಗೂ ವಸತಿ ಒದಗಿಸುವ ಸಲುವಾಗಿ ಪ್ರಧಾನಮಂತ್ರಿ ಆವಾಜ್ ಯೋಜನೆಯನ್ನು ಮುಂದಕ್ಕೆ ತೆಗೆದುಕೊಂಡು ಹೋಗುವ ಕಾರ್ಯವನ್ನು ರಾಜ್ಯಗಳು ಮಾಡಬೇಕಿದೆ ಎಂದು ಅವರು ಹೇಳಿದ್ದಾರೆ.
ನರೇಂದ್ರ ಮೋದಿ ಸರ್ಕಾರ ವಿಭಿನ್ನವಾದ ಸರ್ಕಾರ ಎಂದಿರುವ ಅವರು, ಕೈಗೆಟಕುವ ದರಗಳ ಮನೆಗಳ ನಿರ್ಮಾಣ ಯೋಜನೆಗೆ ಕೇಂದ್ರ ಸಾಕಷ್ಟು ವಿನಾಯಿತಿ ಮತ್ತು ತೆರಿಗೆ ಲಾಭಗಳನ್ನು ಘೋಷಿಸಿದೆ. ಕಡಿಮೆ ದರದ ವಸತಿಗಳ ನಿರ್ಮಾಣಕ್ಕಾಗಿ ಎಫ್ಡಿಐನ್ನು ರಿಲಾಕ್ಸ್ ಮಾಡಲಾಗಿದೆ. ರಿಯಲ್ ಎಸ್ಟೇಟ್ ಮಸೂದೆಯನ್ನೂ ಜಾರಿಗೊಳಿಸಲಾಗಿದೆ ಎಂದು ನೆನಪಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.