ನವದೆಹಲಿ: ವಿಐಪಿಗಳ ಕಾರಿನ ಕೆಂಪು ದೀಪವನ್ನು ನಿಷೇಧಿಸಿ ಪ್ರತಿಯೊಬ್ಬ ಭಾರತೀಯನೂ ವಿಐಪಿ ಎಂದು ಹೇಳಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಟ್ವಿಟರ್ ಬಳಕೆದಾರರು ಸೆಲ್ಯೂಟ್ ಹೊಡೆಯುತ್ತಿದ್ದಾರೆ.
ನವ ಭಾರತದಲ್ಲಿ ಎಲ್ಲರೂ ವಿಐಪಿಗಳು(#EveryoneVIPinNewIndia) ಎಂಬ ಹ್ಯಾಶ್ಟ್ಯಾಗ್ ಬುಧವಾರ ಟಾಪ್ ಟ್ರೆಂಡ್ ಆಗಿದ್ದು, ಪ್ರಧಾನಿಗೆ ಶ್ಲಾಘನೆಯ ಮಹಾಪೂರವೇ ಹರಿದು ಬರುತ್ತಿದೆ.
ಮೇ1ರಿಂದ ರಾಷ್ಟ್ರಪತಿ, ಪ್ರಧಾನಿ ಸೇರಿದಂತೆ ಯಾರೊಬ್ಬರೂ ದೇಶದಲ್ಲಿ ಕೆಂಪುದೀಪ ಬಳಕೆ ಮಾಡುವಂತಿಲ್ಲ. ಈ ಐತಿಹಾಸಿಕ ತೀರ್ಮಾನವನ್ನು ದೇಶದ ಜನ ತುಂಬು ಮನಸ್ಸಿನಿಂದ ಸ್ವಾಗತಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಮೋದಿ, ಪ್ರತಿಯೊಬ್ಬ ಭಾರತೀಯನು ವಿಶೇಷ ವ್ಯಕ್ತಿ, ಪ್ರತಿಯೊಬ್ಬ ಭಾರತೀಯನೂ ವಿಐಪಿ. ಕೆಂಪು ದೀಪಗಳಂತಹ ವಿಐಪಿ ಸಂಕೇತಗಳಿಗೆ ಇಲ್ಲಿ ಜಾಗವಿಲ್ಲ ಎಂದಿದ್ದರು.
ಅವರ ಈ ಮಾತು ಎಲ್ಲರನ್ನೂ ಪುಳಕಿತಗೊಳಿಸಿದ್ದು, ಟ್ವಿಟರ್ಗಳಲ್ಲಿ ಶ್ಲಾಘನೆಗಳು ವ್ಯಕ್ತವಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.