ನವದೆಹಲಿ: ಪ್ರಸಕ್ತ ಸಾಲಿನಲ್ಲಿ ಭಾರತದಲ್ಲಿ ಆಲೂಗಡ್ಡೆಯ ಒಟ್ಟು ಉತ್ಪನ್ನದ ಪ್ರಮಾಣ 47 ಮಿಲಿಯನ್ ಟನ್ಸ್ ಎಂದು ಅಂದಾಜಿಸಲಾಗಿದ್ದು, 2014 ರ ದಾಖಲೆಯ ಸನಿಹ ಬರುವ ನಿರೀಕ್ಷೆ ಇದೆ.
ರಾಷ್ಟ್ರೀಯ ತೋಟಗಾರಿಕಾ ಮಂಡಳಿಯ ನಿರ್ದೇಶಕ ಎ.ಕೆ.ಸಿಂಗ್ ಅವರು ಸುದ್ದಿ ಸಂಸ್ಥೆಯೊಂದಕ್ಕೆ ಈ ಕುರಿತು ಮಾಹಿತಿ ನೀಡಿದ್ದು, 2015-16 ರಲ್ಲಿ 43.4 ಮಿ.ಟನ್ಸ್ ಉತ್ಪಾದಿಸಲಾಗಿತ್ತು. ಆದರೆ 2014-15 ರ ಸಾಲಿನಲ್ಲಿ 48 ಮಿ.ಟನ್ಸ್ ದಾಖಲಾಗಿತ್ತು ಎಂದು ತಿಳಿಸಿದ್ದಾರೆ.
ಆರಂಭದಲ್ಲಿ 43.88 ಮಿ.ಟನ್ಸ್ ಎಂದು ಅಂದಾಜಿಸಲಾಗಿತ್ತು, ಆದರೆ ಬೆಳೆಯನ್ನು ವಾಸ್ತವಿಕವಾಗಿ ಗಮನಿಸಿದಾಗ ಇದು, 2014 ರ ಉತ್ಪಾದನಾ ಪ್ರಮಾಣವನ್ನು ತಲುಪಲಿದೆ ಎಂದು ಸಿಂಗ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಎಷ್ಟು ಪ್ರದೇಶ ವ್ಯಾಪ್ತಿಯಲ್ಲಿ ಆಲೂ ಬೆಳೆಯಲಾಗಿದೆ ಎಂಬ ಲೆಕ್ಕಾಚಾರಕ್ಕಿಂತಲೂ, ಸಕಾಲಕ್ಕೆ ಆದ ಅಕಾಲಿಕ ಮಳೆಯಿಂದ ಬೆಳೆ ಭರಪೂರ ಬರುವ ನಿರೀಕ್ಷೆಯನ್ನು ಹೆಚ್ಚಿಸಿದೆ ಎಂದಿದ್ದಾರೆ.
ಉತ್ತರ ಪ್ರದೇಶ, ಪ. ಬಂಗಾಲ ಹಾಗೂ ಬಿಹಾರ ಇವು ಆಲೂಗಡ್ಡೆಯನ್ನು ಹೆಚ್ಚು ಬೆಳೆಯುವ ಪ್ರಮುಖ ಮೂರು ರಾಜ್ಯಗಳು. ಉತ್ತರ ಪ್ರದೇಶದಲ್ಲಿ ಈ ಬಾರಿ 15 ಮಿ.ಟನ್ಸ್, ಪ.ಬಂಗಾಲದಲ್ಲಿ 8 ಮಿ.ಟನ್ಸ್ ಹಾಗೂ ಬಿಹಾರದಲ್ಲಿ 6 ಮಿ.ಟನ್ಸ್ ಬೆಳೆ ಬರುವ ಸಾಧ್ಯತೆ ಇದೆ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.