ಬೆಂಗಳೂರು: ಹೊಲಿಗೆ ಇಲ್ಲದೇ ಹೃದಯದ ಕವಾಟವನ್ನು ಬಿಜಿಎಸ್ ಗ್ಲೆನೀಗಲ್ಸ್ ಗ್ಲೋಬಲ್ ಹಾಸ್ಪಿಟಲ್ ಬದಲಾಯಿಸಿದ್ದು, ಇದು ದಕ್ಷಿಣ ಭಾರತದಲ್ಲಿಯೇ ಮೊದಲು ಎಂದು ಶಸ್ತ್ರಚಿಕಿತ್ಸೆ ವಿಭಾಗದ ಮುಖ್ಯಸ್ಥ ಡಾ.ಥಾಸಿ ಪಿಳ್ಳೈ ಹೇಳಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, 82 ವರ್ಷ ವಯೋಮಾನದ ಮಹಿಳೆಯೋರ್ವರಿಗೆ ಈ ಚಿಕಿತ್ಸೆ ನೀಡಲಾಗಿದೆ. ಇದಕ್ಕೂ ಮೊದಲು ಎರಡು ಬಾರಿ ಕವಾಟ ಶಸ್ತ್ರಚಿಕಿತ್ಸೆಗೆ ಅವರು ಒಳಗಾಗಿದ್ದರು. ತುಂಬ ಜಾಗರೂಕತೆಯಿಂದ ಶಸ್ತ್ರಚಿಕಿತ್ಸೆ ನೀಡುವ ಸವಾಲು ಬೇರೆ. ವಯಸ್ಸಿನ ಸಮಸ್ಯೆಯೂ ಗಣನೀಯವಾಗಿತ್ತು ಎಂದಿದ್ದಾರೆ.
ಹೊಲಿಗೆರಹಿತ ಮಹಾಪಧಮನಿ ಕವಾಟ ಬದಲಾವಣೆಯ ಮೂಲಕ ಜೈವಿಕ ಪ್ರಾಸ್ಥೆಟಿಕ್ ಕವಾಟ ಜೋಡಿಸಲಾಗಿದೆ. ಇದು ರೋಗಿಗೆ ಕನಿಷ್ಠ ಛೇದನವನ್ನು ಹೊಂದಿರುತ್ತದೆ. ಈ ಶಸ್ತ್ರಚಿಕಿತ್ಸೆ ತ್ವರಿತಗತಿಯಲ್ಲಿ ನಡೆಯಲಿದ್ದು, ಬೇಗನೆ ಚೇತರಿಕೆ ಕಂಡುಬರಲಿದೆ ಎಂದಿದ್ದಾರೆ.
ಡಾ.ಥಾಸಿ ಪಿಳ್ಳೈ ನೇತೃತ್ವದಲ್ಲಿ ನಡೆದ ಶಸ್ತ್ರಚಿಕಿತ್ಸೆಯ ತಂಡದಲ್ಲಿ ಡಾ. ಸಂಜಯ್, ಡಾ. ಭಾಸ್ಕರ್, ಡಾ.ಉಮೇಶ್, ಡಾ. ಶಿವಪ್ರಕಾಶ್ ಮತ್ತು ಡಾ.ಶ್ರೀನಿವಾಸ್ ಇದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.