ಮುಂಬಯಿ: ರೈತರ ಆತ್ಮಹತ್ಯೆಯನ್ನು ತಡೆಯಲು, ರೈತರ ಸಾಲ ಮನ್ನಾ ಮಾಡಲು ಸಾಧ್ಯವಾಗದ ಮಹಾರಾಷ್ಟ್ರದ ದೇವೇಂದ್ರ ಫಡ್ನವಿಸ್ ಸರ್ಕಾರ ಅದಕ್ಕಾಗಿ ಭಾರೀ ಟೀಕೆಯನ್ನೂ ಎದುರಿಸಬೇಕಾಯಿತು. ಆದರೀಗ ಅದು ಶಾಶ್ವತವಾಗಿ ರೈತರ ಆತ್ಮಹತ್ಯೆಯನ್ನು ತಪ್ಪಿಸಲು ಮಹತ್ವದ ತಂತ್ರಗಾರಿಕೆಯನ್ನೇ ರೂಪಿಸಿದೆ.
ರೈತರ ಆತ್ಮಹತ್ಯೆ ಮಾತ್ರವಲ್ಲದೇ, ಬೆಳೆ ನಷ್ಟದಿಂದ ಸಂಭವಿಸುವ ನಷ್ಟವನ್ನೂ ತಪ್ಪಿಸಲು ಈ ತಂತ್ರಗಾರಿಕೆಯಲ್ಲಿನ ಅಂಶಗಳು ಯಶಸ್ವಿಯಾಗಲಿದೆ. ಮುಂದಿನ ಮಳೆಗಾಲದ ಅಧಿವೇಶನದಲ್ಲಿ ಈ ತಂತ್ರಗಾರಿಕೆ ಬಹಿರಂಗಗೊಳಿಸಲು ನಿರ್ಧರಿಸಲಾಗಿದೆ.
ಮೂಲಗಳ ಪ್ರಕಾರ ರೈತರಿಗೆ ಬೀಜ, ರಸಗೊಬ್ಬರ, ವಿದ್ಯುತ್, ನೀರು, ಕಾರ್ಮಿಕರನ್ನು ಸಂಪೂರ್ಣ ಉಚಿತವಾಗಿ ಒದಗಿಸಲು ಫಡ್ನವಿಸ್ ತಂತ್ರಗಾರಿಕೆ ರೂಪಿಸಿದ್ದಾರೆ. ಮಾತ್ರವಲ್ಲ 22 ಮಹತ್ವದ ಬೆಳೆಗಳಿಗೆ ಭರವಸೆಯ ಮೊತ್ತವನ್ನು ಫಿಕ್ಸ್ ಮಾಡಲು ಸರ್ಕಾರ ನಿರ್ಧರಿಸಿದೆ.
ಇದರಿಂದ ಬೆಳೆ ಹಾನಿಯಾದರೂ ರೈತರಿಗೆ ನಷ್ಟವಿಲ್ಲ, ಆತ್ಮಹತ್ಯೆಯೂ ತಪ್ಪುತ್ತದೆ, ಸಾಲಮಾಡುವ ಪ್ರಮೇಯವೂ ಬರುವುದಿಲ್ಲ.
ಈ ಯೋಜನೆಯನ್ನು ಫಡ್ನವಿಸ್ ಸರ್ಕಾರ ಜಾರಿಗೆ ತಂದಿದ್ದೇ ಆದರೆ ದೇಶದ ಕೃಷಿ ವಲಯದಲ್ಲಿ ಮಹತ್ವದ ಮೈಲಿಗಲ್ಲನ್ನು ಸಾಧಿಸಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.