ಮುಂಬೈ : ಮುಸ್ಲಿಂನಲ್ಲದ ನಾನು ಅಜಾನ್ ಶಬ್ದಕ್ಕೆ ಯಾಕೆ ಬೆಳಗ್ಗೆ ಬೇಗ ಏಳಬೇಕು ? ಇದರಿಂದ ನನ್ನ ನಿದ್ರೆಗೆ ತೊಂದರೆಯಾಗುತ್ತಿದೆ ಎಂದು ಬಾಲಿವುಡ್ ಖ್ಯಾತ ಗಾಯಕ ಸೋನು ನಿಗಮ್ ಮಾಡಿದ ಟ್ವೀಟ್ ವಿವಾದಕ್ಕೆಡೆ ಮಾಡಿದೆ.
ಮಸೀದಿಯಲ್ಲಿ ಪ್ರತಿನಿತ್ಯ ಬೆಳಗಿನ ಜಾವ ಪ್ರಾರ್ಥನೆಯನ್ನು ಸ್ಪೀಕರ್ನಲ್ಲಿ ಜೋರಾಗಿ ಹಾಕುವ ಪದ್ಧತಿಯನ್ನು ಗಾಯಕ ಸೋನು ನಿಗಮ್ ಪ್ರಶ್ನಿಸಿದ್ದಾರೆ. ‘ಎಲ್ಲರಿಗೂ ದೇವರು ಒಳ್ಳೆಯದನ್ನು ಮಾಡಲಿ, ನಾನು ಮುಸಲ್ಮಾನನಲ್ಲ ಆದರೂ ಆಜಾನ್ ಮೂಲಕ ಬೆಳಗಿನ ಜಾವ ಎದ್ದೇಳುವ ಪರಿಸ್ಥಿತಿ ಇದೆ. ಇಂತಹ ಬಲವಂತದ ಧಾರ್ಮಿಕ ಆಚರಣೆಗಳು ಭಾರತದಲ್ಲಿ ನಿಲ್ಲುವುದಾದರೂ ಯಾವಾಗ.’
God bless everyone. I’m not a Muslim and I have to be woken up by the Azaan in the morning. When will this forced religiousness end in India
— Sonu Nigam (@sonunigam) April 16, 2017
And by the way Mohammed did not have electricity when he made Islam.. Why do I have to have this cacophony after Edison?
— Sonu Nigam (@sonunigam) April 17, 2017
I don’t believe in any temple or gurudwara using electricity To wake up people who don’t follow the religion . Why then..? Honest? True?
— Sonu Nigam (@sonunigam) April 17, 2017
Gundagardi hai bus…
— Sonu Nigam (@sonunigam) April 17, 2017
‘ಪ್ರವಾದಿ ಮೊಹಮದ್ ಅವರು ಇಸ್ಲಾಂ ಧರ್ಮವನ್ನು ಪರಿಚಯಿಸಿದಾಗ ಯಾವುದೇ ವಿದ್ಯುತ್ ಇರಲಿಲ್ಲ. ಎಡಿಸನ್ ಅನ್ವೇಷಣೆ ನಂತರ ಈ ಗದ್ಧಲವನ್ನು ನಾನೇಕೆ ಕೇಳಬೇಕು?’
‘ದೇವಾಲಯಗಳಲ್ಲಿ ಗುರುದ್ವಾರಗಳಲ್ಲಿ ವಿದ್ಯುತ್ ಉಪಕರಣ ಬಳಸಿ ಧರ್ಮವನ್ನು ಪಾಲಿಸದವರನ್ನು ಎಚ್ಚರಿಸುವ ಪದ್ಧತಿಯ ಮೇಲೆ ನನಗೆ ನಂಬಿಕೆ ಇಲ್ಲ. ಹಾಗಾದರೆ ಈ ರೀತಿಯಾದ ಧಾರ್ಮಿಕವಾಗಿ ಒತ್ತಾಯ ಹೇರುವುದೇಕೆ?’
‘ಇದು ಕೇವಲ ಗೂಂಡಾಗಿರಿ ಅಷ್ಟೇ?’
ಹೀಗೇ ಸೋನು ನಿಗಮ್ ಟ್ವೀಟ್ ಮಾಡಿದ್ದು, ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.
ಗಮನಿಸಬೇಕಾದ ಸಂಗತಿ ಎಂದರೆ, ಸೋನು ನಿಗಮ್ ಕೇವಲ ಮಸೀದಿ ಆಜಾನ್ ಪದ್ಧತಿಯನ್ನಷ್ಟೇ ಉದ್ದೇಶಿಸಿ ತಮ್ಮ ಅಸಮಾಧಾನ ವ್ಯಕ್ತಪಡಿಸಿಲ್ಲ. ದೇವಸ್ಥಾನ ಗುರುದ್ವಾರಗಳ ಈ ರೀತಿಯ ಆಚರಣೆಗಳಿಂದಲೂ ಇತರರಿಗೆ ತೊಂದರೆಯಾಗುವುದು ಅದೂ ನಿಲ್ಲಬೇಕು ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.