ನವದೆಹಲಿ: 14 ವರ್ಷದ ಕೆಳಗಿನ ಮಕ್ಕಳು ಅಪಾಯಕಾರಿಯಲ್ಲದ ಕಾರ್ಖಾನೆಗಳಲ್ಲಿ ಇನ್ನು ಮುಂದೆ ಕೆಲಸ ಮಾಡಬಹುದಾಗಿದೆ. ಈ ಸಂಬಂಧ ಬಾಲ ಕಾರ್ಮಿಕ ಕಾಯ್ದೆಯ ತಿದ್ದುಪಡಿಗೆ ಬುಧವಾರ ಸಂಪುಟು ಒಪ್ಪಿಗೆ ಸೂಚಿಸಿದೆ.
ಇದರಿಂದ ಮನೋರಂಜನಾ ಕ್ಷೇತ್ರಗಳಲ್ಲಿ, ಕೌಟುಂಬಿಕ ಉದ್ಯಮಗಳಲ್ಲಿ 14 ವರ್ಷದೊಳಗಿನ ಮಕ್ಕಳು ಕೆಲಸ ಮಾಡಬಹುದಾಗಿದೆ. ಶಾಲೆ ಸಮಯವನ್ನು ಹೊರತುಪಡಿಸಿ ಮತ್ತು ರಜಾದಿನಗಳಲ್ಲಿ ಮಾತ್ರ ಮಕ್ಕಳಿಗೆ ಕೆಲಸ ಮಾಡಲು ಅವಕಾಶ ನೀಡಲಾಗಿದೆ.
ಈ ಹೊಸ ತಿದ್ದುಪಡಿಯಲ್ಲೂ 14 ರಿಂದ 18 ವರ್ಷದ ಮಕ್ಕಳು ಅಪಾಯಕಾರಿ ಉದ್ದಿಮೆಗಳಲ್ಲಿ ಕೆಲಸ ಮಾಡುವುದನ್ನು ನಿಷೇಧಿಸಲಾಗಿದೆ. ಈ ಕಾನೂನನ್ನು ಉಲ್ಲಂಘಿಸಿದವರಿಗೆ ಹೆಚ್ಚಿನ ಶಿಕ್ಷೆಯನ್ನು ನೀಡಲಾಗುತ್ತದೆ. ಮೊದಲ ಉಲ್ಲಂಘನೆಗೆ ಪೋಷಕರಿಗೆ ಯಾವುದೇ ಶಿಕ್ಷೆ ಇಲ್ಲದಿದ್ದರೂ, ಕೆಲಸದ ಒಡೆಯರಿಗೆ ಮೊದಲ ಉಲ್ಲಂಘನೆಗೆ ಶಿಕ್ಷೆ ಜಾರಿಯಾಗಲಿದೆ.
ಪುನಾವರ್ತಿತವಾಗಿ ಕಾನೂನು ಉಲ್ಲಂಘನೆಗೆ ಮಾಡುವ ಪೋಷಕರಿಗೆ 10,000 ದಂಡ ಶಿಕ್ಷೆ ವಿಧಿಸಲಾಗುತ್ತದೆ. ಮೊದಲ ಉಲ್ಲಂಘನೆಗೆ ಕೆಲಸದ ಒಡೆಯರಿಗೆ ದಂಡವನ್ನು 20 ಸಾವಿರದಿಂದ 50 ಸಾವಿರಕ್ಕೆ ಅಂದರೆ ಎರಡುವರೆ ಪಟ್ಟು ಹೆಚ್ಚಿಸಲಾಗಿದೆ. ಎರಡನೇ ಮತ್ತು ಮರು ಉಲ್ಲಂಘನೆಗಳಿಗೆ ಒಂದು ವರ್ಷದಿಂದ ಮೂರು ವರ್ಷ ಜೈಲು ಶಿಕ್ಷೆಯನ್ನು ನೀಡಲಾಗುತ್ತದೆ.
ಸಂಪುಟ ಒಪ್ಪಿಗೆ ನೀಡಿದ್ದರಿಂದ ಬಾಲ ಕಾರ್ಮಿಕ ತಿದ್ದುಪಡಿ ಕಾಯ್ದೆ 2012 ರನ್ನು ಲೋಕಸಭೆಯಲ್ಲಿ ಮಂಡಿಸಲಾಗುವುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.